ಪೆರ್ಲ: ಗ್ರಂಥಾಲಯಗಳ ಪಿತಾಮಹ ಎಂದು ಕರೆಯಲ್ಪಡುವ ಪಿ.ಯನ್ ಪಣಿಕ್ಕರ್ ಕೇರಳದಲ್ಲಿ 1945 ಸೆ.14 ರಂದು ಗ್ರಂಥಾಲಯ ಕ್ರಾಂತಿಗೆ ಮೊದಲ ಚಾಲನೆ ನೀಡಿದರು.ಇದರ ಸವಿ ನೆನಪಿಗೆ ಸ್ವರ್ಗದ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ಅಕ್ಷರ ದೀಪ ಕಾರ್ಯಕ್ರಮ ನಡೆಯಿತು.
ಗ್ರಂಥಾಲಯದಲ್ಲಿ ಎಪ್ಪತೈದು ದೀಪಗಳನ್ನು ಹಚ್ಚಿ ಬೆಳಗಿಸಲಾಯಿತು. ಈ ಸಂದರ್ಭದಲ್ಲಿ ಪುಸ್ತಕ ಸಂಗ್ರಹ ಯಜ್ಞದ ಅಂಗವಾಗಿ ಮಹೇಶ್ ಬಿ ಬೈರಡ್ಕ ,ಗಣೇಶ್ ಕಾರ್ಯತಡ್ಕ ಇವರು ನೀಡಿದ ಪುಸ್ತಕಗಳನ್ನು ಸ್ವೀಕರಿಸಲಾಯಿತು. ಹೊಸ ಸದಸ್ಯತನ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಬಾಬು ಸ್ವರ್ಗ ವಹಿಸಿದರು. ಸಭೆಯಲ್ಲಿ ರಕ್ಷಿತ್ ಬೈರಡ್ಕ, ಧನ್‍ರಾಜ್, ಪ್ರಶಾಂತ್ ದೇಶಮೂಲೆ, ಪ್ರಸನ್ನ ಕುಮಾರ್.ಬಿ. ಉಪಸ್ಥಿತರಿದ್ದರು. ಗ್ರಂಥಾಲಯ ಕಾರ್ಯದರ್ಶಿ ರಾಮಚಂದ್ರ ಎಂ ಸ್ವಾಗತಿಸಿ, ರವಿ ವಾಣಿನಗರ ವಂದಿಸಿದರು.



