ಮಂಜೇಶ್ವರ: ಸಂಸ್ಕಾರ ಸಾಹಿತಿ ಮಂಜೇಶ್ವರ ಬ್ಲಾಕ್ ಸಮಿತಿಯ ನೇತೃತ್ವದಲ್ಲಿ ಖ್ಯಾತ ಅಪರೂಪದ ಶಾಹಿಬಾಜಿ ವಾದಕ, ಸಂಗೀತ ಕಲಾವಿದ ಮೀಯಪದವಿನ ಎನ್.ರಾಮ ಅವರಿಗೆ ಸಂಸ್ಕಾರ ಸಾಹಿತಿ ಮಂಜೇಶ್ಲರ ಬ್ಲಾಕ್ ಸಮಿತಿ ವತಿಯಿಂದ ಓಣಂ ಪ್ರಯುಕ್ತ ಅವರ ಸ್ವಗೃಹದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.
ಸಮಿತಿಯ ಅಧ್ಯಕ್ಷ ಸಂಕಬೈಲು ಸತೀಶ ಅಡಪ ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅವರು ಎನ್.ರಾಮ ಅವರನ್ನು ಶಾಲು ಹೊದಿಸಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಸಮ್ಮಾನಿಸಿ ಗೌರವಿಸಿದರು. ಓಣಂ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಸಂಸ್ಕಾರ ಸಾಹಿತಿಯ ಮಂಜೇಶ್ವರ ಬ್ಲಾಕ್ ಸಮಿತಿ ಪದಾಧಿಕಾರಿಗಳಾದ ಆರಿಫ್ ಮಚ್ಚಂಪಾಡಿ, ಜಗದೀಶ್ ಮೂಡಂಬೈಲು, ದಾಮೋದರ ಮಾಸ್ತರ್ ಕಬ್ಬಿನಹಿತ್ಲು ಉಪಸ್ಥಿತರಿದ್ದರು.


