ಕಾಸರಗೋಡು: ರಾಷ್ಟ್ರೀಯ ಪೋಷಕಾಹಾರ ಮಾಸಾಚರಣೆ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಸೆ.17ರಿಂದ ಅ.16 ವರೆಗೆ ನ್ಯಾಷನಲ್ ನ್ಯೂಟ್ರೀಷನ್ ಮಿಷನ್ ನೇತೃತ್ವದಲ್ಲಿ ದೇಶಾದ್ಯಂತ "ಪೋಷಣ್ ಮಾಹ್" ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಜಿಲ್ಲೆಯಲ್ಲಿ ಸೆ.3ರಿಂದ ವಿವಿಧ ಕಾರ್ಯಕ್ರಮಗಳು ನಡೆದುಬರುತ್ತಿವೆ. ಕಾಸರಗೋಡು ಸಿಡ್ಕೋ ಸಂಸ್ಥೆಯ ಸಭಾಂಗಣದಲ್ಲಿ ಸಿಗ್ನೇಚರ್ ಕೇಂಪೇನ್ ನ ಜಿಲ್ಲಾ ಮಟ್ಟದ ಕಾರ್ಯಕ್ರಮ ಈ ಸಂಬಂಧ ನಡೆಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಜಿಲ್ಲಾ ಮಟ್ಟದ ಐ.ಸಿ.ಡಿ.ಎಸ್. ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಹಿಳಾ ಶಿಶು ಕಲ್ಯಾಣ ಅಧಿಕಾರಿ ದೇನ ಭರತನ್, ಜಿಲ್ಲಾ ಸ್ವಚ್ಛ್ ಭಾರತ್ ಪ್ರೇರಕ್ ಅಷ್ಹರ್, ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು, ಐ.ಸಿ.ಡಿಎಸ್. ಮೇಲ್ವಿಚಾರಕರು, ನ್ಯಾಷನಲ್ ನ್ಯೂಟ್ರಿಷನ್ ಮಿಷನ್ ಜಿಲ್ಲಾ, ಬ್ಲೋಕ್ ಮಟ್ಟದ ಸಂಚಾಲಕರು, ಸಹಾಯಕರು ಸಹಿತ ನೂರಾರ ಮಂದಿ ಭಾಗವಹಿಸಿದ್ದರು.
ಪೋಷಕ ಆಹಾರ ಮಾಸಾಚರಣೆ ಆರಂಭ
0
ಸೆಪ್ಟೆಂಬರ್ 17, 2019