ಕಾಸರಗೋಡು: ಕೇರಳ ಖಾದಿ ಗ್ರಾಮೋದ್ಯಮ ಮಂಡಳಿ ಜಾರಿಗೊಳಿಸುವ ಪಿ.ಎಂ.ಇ.ಜಿ.ಪಿ.(ಪ್ರಧಾನಿ ಅವರ ವಿಶೇಷ ಉದ್ಯೋಗ ಯೋಜನೆ), ಎಂಡೆ ಗ್ರಾಮಂ(ನನ್ನ ಗ್ರಾಮ) ಎಂಬ ಸ್ವೋದ್ಯೋಗ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಮೀಣ ವಲಯದಲ್ಲಿ ಆರಂಭಿಸಲಾಗುವ, ಉತ್ಪಾದನೆ ವಲಯದಲ್ಲಿ 25ಲಕ್ಷ ರೂ. ವರೆಗಿನ, ಸೇವಾ ವಲಯದಲ್ಲಿ 10 ಲಕ್ಷ ರೂ. ವರೆಗಿನ ಉದ್ಯಮ ಘಟಕಗಳ ಒಟ್ಟು ಯೋಜನೆ ವೆಚ್ಚದ ಶೇ.25ರಿಂದ 35 ರ ವರೆಗೆ ಮಾರ್ಜಿನ್ ಮನಿ ಮಂಜೂರು ಮಾಡಲಾಗುವುದು. ಬ್ಯಾಂಕ್ ಸಾಲ ಲಭ್ಯತೆ ಖಚಿತಪಡಿಸಿ ಆನ್ ಲೈನ್ ಮೂಲಕ ಪಿ.ಎಂ.ಇ.ಜಿ.ಸಿ. ಅರ್ಜಿ ಸಲ್ಲಿಸಬೇಕು. ಪಿ.ಎಂ.ಇ.ಜಿ.ಸಿ. ಇ-ಪೆÇೀರ್ಟಲ್ ಸಂದರ್ಶಿಸಿ ಕೆ.ವಿ.ಐ.ಬಿ., ಕಾಸರಗೋಡು ಏಜೆನ್ಸಿ ಆಯ್ಕೆ ಮಾಡಿ ಅರ್ಜಿ ಸಲ್ಲಿಸಬೇಕು. ಉತ್ಪಾದನೆ, ಸೇವೆ ವಲಯದಲ್ಲಿ 5 ಲಕ್ಷ ರೂ.ವರೆಗೆ ಯೋಜನೆ ವೆಚ್ಚದಲ್ಲಿ ಬರುವ ಉದ್ದಿಮೆ ಘಟಕಗಳಿಗೆ ಶೇ.25ರಿಂದ 40 ರ ವರೆಗೆ ಮಾರ್ಜಿನ್ ಮನಿ ಲಭ್ಯವಾಗಿಸುವ ಉದ್ಯೋಗ ಯೋಜನೆ `ಎಂಡೆ ಗ್ರಾಮಂ' ಆಗಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 0467-2200585 ಸಂಪರ್ಕಿಸಬಹುದು.

