ಕಾಸರಗೋಡು: ಕಾಸರಗೋಡು ತಾಲೂಕು ನಾಗರೀಕ ಪೂರೈಕೆ ಕಚೇರಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಆದ್ಯತೆ ಕಾರ್ಡ್(ಬಿ.ಪಿ.ಎಲ್) ಗಾಗಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ನಾಗರಿಕ ಪೂರೈಕೆ ಕಚೇರಿ, ತಾಲೂಕು ನಾಗರಿಕ ಪೂರೈಕೆ ಕಚೇರಿ, ಅಕ್ಷಯ(ಆನ್‍ಲೈನ್) ಇತ್ಯಾದಿ ಮೂಲಕ ಅರ್ಜಿ ಸಲ್ಲಿಸಿದವರಿಗಾಗಿ ಸೆ.26, 27 ಮತ್ತು 28ರಂದು ಅದಾಲತ್ ನಡೆಸಲಾಗುವುದು.
ಸೆ.26ರಂದು ಕಾಸರಗೋಡು ತಾಲೂಕು ಸಪ್ಲೈ ಆಫೀಸ್‍ನಲ್ಲಿ ಬೆಳಗ್ಗೆ 10.30ರಿಂದ ಸಂಜೆ 3.30 ವರೆಗೆ ಅದಾಲತ್ ನಡೆಯಲಿದೆ. ಕಾಸರಗೋಡು ನಗರಸಭೆ, ಮೊಗ್ರಾಲ್ ಪುತ್ತೂರು, ಮಧೂರು ಗ್ರಾಮ ಪಂಚಾಯತ್ ನಿವಾಸಿಗಳಿಗಾಗಿ ಅದಾಲತ್ ನಡೆಯಲಿದೆ. 27ರಂದು ಕಾರಡ್ಕ, ಚೆಮ್ನಾಡ್, ಕುತ್ತಿಕೋಲ್, ಬೇಡಡ್ಕ ಪಂಚಾಯತ್ ನಿವಾಸಿಗಳಿಗಾಗಿ, 28ರಂದು ದೇಲಂಪಾಡಿ, ಬೆಳ್ಳೂರು, ಬದಿಯಡ್ಕ, ಕುಂಬ್ಡಾಜೆ, ಚೆಂಗಳ, ಮುಳಿಯಾರು ಪಂಚಾಯತ್ ನಿವಾಸಿಗಳಿಗಾಗಿ ಅದಾಲತ್ ಜರಗಲಿದೆ.
ಅರ್ಜಿ ಸಲ್ಲಿಸಿದವರಿಗೆ ಮಾತ್ರ ಈ ಅವಕಾಶಗಳಿವೆ. ನೂತನ ಅರ್ಜಿಗಳನ್ನು ಇಲ್ಲಿ ಸ್ವೀಕರಿಸುವುದಿಲ್ಲ. ಅರ್ಜಿದಾರರು ಅಸಲಿ ಪಡಿತರ ಚೀಟಿ, ಮನೆ ಮತ್ತು ಜಾಗದ ಶುಲ್ಕ ಪಾವತಿಸಿದ ರಶೀದಿಯ ನಕಲು, ಗಂಭೀರ ರೂಪದ ರೋಗವುಳ್ಳವರು ಆ ಬಗೆಗಿನ ಸಾಕ್ಷ್ಯಪತ್ರಗಳು, ಇತ್ತೀಚೆಗೆ ಪಾತಿಸಿದ ವಿದ್ಯುತ್ ಶುಲ್ಕ, ಬಾಡಿಗೆ ಮನೆಯಲ್ಲಿರುವವರು ಬಾಡಿಗೆ ಚೀಟಿಯ ನಕಲು ಸಹಿತ ಹಾಜರಾಗಬೇಕು.

