ಮುಳ್ಳೇರಿಯ: ಕೇರಳ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಕುಂಬಳೆ ಉಪಜಿಲ್ಲಾ ಮಟ್ಟದ ಪಟ್ರೋಲ್ ಲೀಡರ್ಸ್ ತರಬೇತಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ಬೆಳ್ಳೂರು ಗ್ರಾ.ಪಂ.ಅಧ್ಯಕ್ಷೆ ಲತಾ ಯುವರಾಜ್ ದೀಪ ಬೆಳಗಿಸಿ ತರಬೇತಿ ಶಿಬಿರ ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯ ಬಾಬು ಅನೆಕ್ಕಳ ಅಧ್ಯಕ್ಷತೆ ವಹಿಸಿದರು.ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಎನ್.ನಂದಿಕೇಶನ್, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎನ್.ಎಚ್.ಮೊಹಮ್ಮದ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಡಿ.ಸಿ ಗುರುಮೂರ್ತಿ, ನಿವೃತ್ತ ಮುಖ್ಯ ಶಿಕ್ಷಕ ಮಹಾಲಿಂಗೇಶ್ವರ ಭಟ್ ಶುಭ ಹಾರೈಸಿದರು.
ಶಾಲಾ ವ್ಯವಸ್ಥಾಪ ಸಮಿತಿ ಅಧ್ಯಕ್ಷ ಶಶಿಧರ ಗೋಳಿಕಟ್ಟೆ, ಮಾತೃ ಸಂಘ ಅಧ್ಯಕ್ಷೆ ಶಾಂತಕುಮಾರಿ, ರಕ್ಷಕ ಶಿಕ್ಷಕ ಸಂಘ ಉಪಾಧ್ಯಕ್ಷ ಎನ್.ಎಚ್.ಇಬ್ರಾಹಿಂ, ಸದಸ್ಯ ಹಮೀದ್, ಕ್ಯಾಂಪ್ ನಾಯಕ ಸೂರ್ಯನಾರಾಯಣ ಎಚ್., ಗೈಡ್ಸ್ ನಾಯಕಿ ಚಂದ್ರಾವತಿ, ಸಿಬ್ಭಂದಿ ಕಾರ್ಯದರ್ಶಿ ಒ.ಮೋಹನನ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ವಾರಿಜಾ ಸ್ವಾಗತಿಸಿದರು.ಸ್ಕೌಟ್ ಮತ್ತು ಗೈಡ್ಸ್ ಉಪಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್ ವಂದಿಸಿದರು.ಶಿಕ್ಷಕ ದಾಸಪ್ಪ ನಿರೂಪಿಸಿದರು.
ನಾಲ್ಕು ದಿನ ನಡೆಯುವ ಶಿಬಿರದಲ್ಲಿ ಕುಂಬಳೆ ಉಪಜಿಲ್ಲೆಯ ವಿವಿಧ ಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಭಾಗವಹಿಸುತ್ತಿದ್ದಾರೆ.


