ಕುಂಬಳೆ: ವಿದ್ಯಾರ್ಥಿಗಳ ಸಹಾಯವಾಣಿಯಾದ ಚೈಲ್ಡ್‍ಲೈನ್ ವತಿಯಿಂದ ಧರ್ಮತ್ತಡ್ಕ ಶ್ರೀದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಕ್ಕಳ ಸಮಸ್ಯೆಗಳ ಕುರಿತು ಜಾಗೃತಿ ಶಿಬಿರ ಗುರುವಾರ ನಡೆಯಿತು.
ಚೈಲ್ಡ್‍ಲೈನ್ ಕಾಸರಗೋಡು ತಂಡದ ಸದಸ್ಯ ಆನಂದ ಹಾಗೂ ರಮ್ಯಾ ತರಗತಿ ನಡೆಸಿದರು. ಸಂಸ್ಥೆಯ ವ್ಯವಸ್ಥಾಪಕ ಎನ್. ಶಂಕರನಾರಾಯಣ ಭಟ್, ಅಧ್ಯಾಪಕ ರಾಮಕೃಷ್ಣ ಭಟ್ ಶುಭಾಶಂಸನೆಗೈದರು. ಶಾಲಾ ಮುಖ್ಯೋಪಾಧ್ಯಾಯ ಇ. ಎಚ್. ಗೋವಿಂದ ಭಟ್ ಸ್ವಾಗತಿಸಿ, ಸ್ಕೌಟ್ ಅಧ್ಯಾಪಕ ಶಿವಪ್ರಸಾದ್ ಚೆರುಗೋಳಿ ವಂದಿಸಿದರು. ಗೈಡ್ ಅಧ್ಯಾಪಿಕೆ ವಿಚೇತ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರಾದ ಪ್ರದೀಪ್ ಕರ್ವಜೆ, ಶಶಿಕುಮಾರ್ ಪಿ., ಪ್ರಶಾಂತ ಹೊಳ್ಳ ಎನ್., ರಾಜಕುಮಾರ ಕೆ. ಕೇಶವಪ್ರಸಾದ ಎಡಕ್ಕಾನ ಸಹಕರಿಸಿದರು.


