ಕುಂಬಳೆ: ಧರ್ಮತ್ತಡ್ಕ ಯುವಕ ಸಂಘ ಗ್ರಂಥಾಲಯ ಹಾಗು ವಾಚನಾಲಯ ಇದರ ನೇತೃತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ವನಿತಾ ಆರ್.ಶೆಟ್ಟಿ ಸಾರ್ವಜನಿಕ ಗಣೇಶೋತ್ಸವದ ಆಚರಣೆ ಪ್ರಥಮವಾಗಿ ಆರಂಭಿಸಿದ್ದು ಬಾಲಗಂಗಾಧರ ತಿಲಕ್. ಜನರ ಮಧ್ಯೆ ಅಸ್ಪೃಶ್ಯತೆಯಂತಹ ಪಿಡುಗುಗಳು ಹೋಗಲಾಡಿಸಲು ಇಂತಹ ಆಚರಣೆಗಳನ್ನು ಆರಂಭಿಸಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಗಿರಿಧರ್ ರಾವ್ ಮಾತನಾಡಿ ವಿದೇಶಿ ಸಂಸ್ಕøತಿಯನು ಅಳವಡಿಸಿ ಕೊಳ್ಳುತ್ತಿರುವ ಇಂದಿನ ಸಮಾಜದಲ್ಲಿ ಭಾರತೀಯ ಸಂಸ್ಕøತಿಯ ಮಹತ್ವ ತಿಳಿಸುವ ಗಣೇಶ ಚತುರ್ಥಿ, ಶ್ರೀ ಕೃಷ್ಣ ಜನ್ಮಾಷ್ಟಮಿಯಂತಹ ಆಚರಣೆಗಳು ಹೆಚ್ಚು ಹೆಚ್ಚು ನಡೆಯಬೇಕು. ಆ ಮೂಲಕ ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೀಯಪದವು ಹೈಯರ್ ಸೆಕಂಡರಿ ಶಾಲಾ ವಾಣಿಜ್ಯಶಾಸ್ತ್ರದ ಅಧ್ಯಾಪಕ ಗ್ರಂಥಾಲಯದ ಅಧ್ಯಕ್ಷರೂ ಆದ ರವಿಲೋಚನ ಸಿ.ಎಚ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಮಂಜೇಶ್ವರ ತಾಲೂಕು ಲ್ಯೆಬ್ರರಿ ಕೌನ್ಸಿಲ್ ಸದಸ್ಯ ಪಿ.ರಾಮಚಂದ್ರ ಭಟ್ ಶುಭಹಾರೈಸಿದರು. ಗ್ರಂಥಾಲಯದ ಉಪಾಧ್ಯಕ್ಷರಾದ ಕೆ.ಶಂಕರಗೌಡ ಸ್ವಾಗತಿಸಿ, ಗ್ರಂಥಾಲಯದ ಕಾರ್ಯದರ್ಶಿ ರವಿಚಂದ್ರ ಇಟ್ಟಿಗುಂಡಿ ವಂದಿಸಿದರು. ವಿವಿಧ ಕಲಾ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು.