HEALTH TIPS

ಉಚಿತ ಕಣ್ಣಿನ ಪೆÇರೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

      ಮಂಜೇಶ್ವರ: ಶ್ರೀ ಧರ್ಮಚಕ್ರ ಟ್ರಸ್ಟ್, ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಹಾಗೂ ಶ್ರೀವತ್ಸ ಉಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೆÇರೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವು ಭಾನುವಾರ ವರ್ಕಾಡಿ ಶ್ರೀ ನಾರಾಯಣಗುರು ಪ್ರಸಾದಿತ ಯಕ್ಷಗಾನ ಕಲಾಮಂದಿರದಲ್ಲಿ ಜರಗಿತು.
     ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್‍ನ ನಿವೃತ್ತ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಎ. ದೀಪಜ್ವಲನೆಗೈದು ಶಿಬಿರಕ್ಕೆ ಚಾಲನೆಯನ್ನು ನೀಡಿದರು. ಶ್ರೀ ನಾರಾಯಣ ಗುರು ಮಂದಿರದ ಕಾರ್ಯದರ್ಶಿ ವಿ.ಶ್ರೀಧರ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ಆಡಳಿತಾಧಿಕಾರಿ ಲಯನ್ ಡಾ.ಎಂ.ಶ್ರೀಧರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಘ ಸಂಸ್ಥೆಗಳು ಇಂತಹ ಶಿಬಿರಕ್ಕೆ ಬೆಂಬಲವನ್ನು ನೀಡುವುದರಿಂದ ಪರೋಕ್ಷವಾಗಿ ಅನೇಕ ಬಡರೋಗಿಗಳಿಗೆ ನೆರವಾದಂತಾಗುತ್ತದೆ. ಅದೆಷ್ಟೋ ಮಂದಿಗೆ ದೃಷ್ಟಿದೋಷವಿದ್ದು ಆರ್ಥಿಕ ಅಡಚಣೆಯಿಂದಾಗಿ ತಪಾಸಣೆಗೆ ತೆರಳದೇ ಸಂಕಷ್ಟವನ್ನನುಭವಿಸುತ್ತಾರೆ. ಇದೆಲ್ಲದಕ್ಕೆ ಪರಿಹಾರವನ್ನು ಕಾಣುವ ನಿಟ್ಟಿನಲ್ಲಿ ಅನೇಕ ಕಡೆಗಳಲ್ಲಿ ವಿವಿಧ ಸಂಘಸಂಸ್ಥೆಗಳ ನೆರವಿನಿಂದ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದರು. ವರ್ಕಾಡಿ ಗ್ರಾಮ ಪಂಚಾಯತಿ ಸದಸ್ಯ ಆನಂದ ಟಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ನೇತ್ರತಜ್ಞ ಡಾ.ಆನಂದ ತಪಾಸಣೆಯನ್ನು ಮಾಡಿದರು. ಶಿಬಿರ ಸಂಯೋಜಕ ಎಸ್.ಎನ್.ಭಟ್ ಅರ್ಜುನಗುಳಿ ಉಪಸ್ಥಿತರಿದ್ದರು. ನೂರಾರು ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries