ಮಂಜೇಶ್ವರ: ವರ್ಕಾಡಿ ಶ್ರೀ ಕಾವೀ: ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನ.26 ರಿಂದ ಡಿ.1 ರ ವರೆಗೆ ಯಕ್ಷಷಷ್ಠೀ ತಾಳಮದ್ದಳೆ ಸೇವೆ ಹಾಗು ವಿವಿಧ ಕ್ಷೇತ್ರದ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ನ.26 ರಂದು ಬೆಳಗ್ಗೆ 10 ಗಂಟೆಗೆ ಬ್ರಹ್ಮಶ್ರೀ ದಿನೇಶ್ ತಂತ್ರಿ ವರ್ಕಾಡಿ ಅವರು ದೀಪ ಪ್ರಜ್ವಲನೆಗೈಯ್ಯಲಿದ್ದಾರೆ. ಆ ಬಳಿಕ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, 12.30 ರಿಂದ ಸಭಾ ಕಾರ್ಯಕ್ರಮ ಜರಗಲಿದೆ. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಟಿ.ದುರ್ಗಾದಾಸ್ ಭಂಡಾರಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ರವಿ ಅಲೆವೂರಾಯ ವರ್ಕಾಡಿ, ಕೃಷ್ಣ ಕಾರಂತ ಮರಿಕಾಪು ಭಾಗವಹಿಸುವರು. ಇದೇ ಸಂದರ್ಭದಲ್ಲಿ ರವಿ ಅಲೆವೂರಾಯ ವರ್ಕಾಡಿ, ಮಾಧವ ನಾವಡ ವರ್ಕಾಡಿ, ಬಾಲಕೃಷ್ಣ ಆಚಾರ್ಯ ಹರೇಕಳ ಪಾವೂರು, ರಾಮ ಪೂಜಾರಿ ಆಲಬೆ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಡಿ.1 ರಂದು ಮಧ್ಯಾಹ್ನ 12.30 ರಿಂದ ಸಭಾ ಕಾರ್ಯಕ್ರಮ, ಸಮಾರೋಪ ಸಮಾರಂಭ ನಡೆಯುವುದು.

