ಬದಿಯಡ್ಕ: ಪೆರಡಾಲ ಶ್ರೀಉದನೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ರೂಪುಗೊಂಡ ಶ್ರೀಉದನೇಶ್ವರ ಭಕ್ತವೃಂದ ಸಂಘದ ಮಹಾಸಭೆ ಕ್ಷೇತ್ರ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ರವಿಕುಮಾರ ರೈ ಪೆರಡಾಲಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯನ್ನು ಪುರೋಹಿತ ವೆಂಕಟೇಶ್ವರ ಭಟ್ ಪಟ್ಟಾಜೆ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಶ್ರೀಕ್ಷೇತ್ರದ ಅಭಿವೃದ್ದಿ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಕಳಕಳಿಯ ಚಟುವಟಿಕೆಗಲಲ್ಲೂ ಸಂಘಟನೆ ಕಾರ್ಯತತ್ಪರವಾಗಬೇಕು ಎಂದು ತಿಳಿಸಿ ಶುಭಹಾರೈಸಿದರು.
ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಮಾಜಿ ಟ್ರಸ್ಟಿ ಚಂದ್ರಹಾಸ ರೈ ಪೆರಡಾಲಗುತ್ತು, ತಿರುಪತಿಕುಮಾರ್ ಭಟ್, ಉಮೇಶ ರೈ ಮೇಗಿನ ಕಡಾರು, ನ್ಯಾಯವಾದಿ ನರಸಿಂಹ ಶೆಣೈ ಬದಿಯಡ್ಕ, ಮೊಕ್ತೇಸರರಾದ ಜಗನ್ನಾಥ ರೈ ಪೆರಡಾಲಗುತ್ತು, ವೆಂಕಟರಮಣ ಭಟ್, ಕೃಷ್ಣ ಪೆರ್ಮುಖ, ಜಗದೀಶ ಪೆರಡಾಲ, ತಗಂಗಾಧರ ಗೋಳಿಯಡ್ಕ ಉಪಸ್ಥಿತರಿದ್ದು ಶುಭಹಾರೈಸಿದರು. ಸಂಘಟನೆಯ ಕಾರ್ಯದರ್ಶಿ ರಾಮ ಮುರಿಯಂಕೂಡ್ಲು ಸ್ವಾಗತಿಸಿ, ನಿರಂಜನ ರೈ ಪೆರಡಾಲ ವಂದಿಸಿದರು.
ಈ ಸಂದರ್ಭ ನೂತನ ಸಮಿತಿ ರಚಿಸಲಾಯಿತು. ಯೋಗೀಶ್ ಕಡಮಣ್ಣಾಯ, ಪಿ.ಜಿ.ಚಂದ್ರಹಾಸ ರೈ (ಗೌರವಾಧ್ಯಕ್ಷರು), ಪಿ.ಜಿ.ಜಗನ್ನಾಥ ರೈ, ಕೃಷ್ಣ ಬದಿಯಡ್ಕ, ವೆಂಕಟೇಶ್ವರ ಭಟ್, ಬಾಲಕೃಷ್ಣ ಶೆಟ್ಟಿ, ಪದ್ಮನಾಭ ಶೆಟ್ಟಿ, ಉಮೇಶ ರೈ ಮೇಗಿನ ಕಡಾರು, ರಾಮ ಭಟ್, ನಾರಾಯಣ ಮಣಿಯಾಣಿ(ಗೌರವ ಸಲಹೆಗಾರರು), ತಿರುಪತಿಕುಮಾರ ಭಟ್(ಅಧ್ಯಕ್ಷರು), ರವಿಕುಮಾರ್ ರೈ ಪಿ.ಜಿ, ವೆಂಕಟರಮಣ ಭಟ್ ಚಂಬಲ್ತಿಮಾರ್, ನರಸಿಂಹ ಶೆಣೈ, ಗಂಗಾಧರ ಗೋಳಿಯಡ್ಕ(ಉಪಾಧ್ಯಕ್ಷರು), ರಾಮ ಮುರಿಯಂಕೂಡ್ಲು(ಕಾರ್ಯದರ್ಶಿ), ನಿರಂಜನ ರೈ ಪೆರಡಾಲ, ಜಯಪ್ರಕಾಶ ಪಟ್ಟಾಜೆ(ಜೊತೆ ಕಾರ್ಯದರ್ಶಿ), ಜಗದೀಶ ಪೆರಡಾಲ(ಕೋಶಾಧಿಕಾರಿ) ಅವರನ್ನು ಆರಿಸಲಾಯಿತು.


