HEALTH TIPS

ಕೌಂಟ್ ಡೌನ್-ರಿಮೈನ್ 9 ಓನ್ಲೀ!- ರಾಜ್ಯ ಮಟ್ಟದ ಶಾಲಾ ಕಲೋತ್ಸವ: ಇನ್ನು ಉಳಿದಿರುವುದು 9 ದಿನಗಳು ಮಾತ್ರ

                ಕಾಸರಗೋಡು:  ಗಡಿನಾಡ ಮಣ್ಣು ರಾಜ್ಯ ಮಟ್ಟದ ಶಾಲಾ ಕಲೋತ್ಸವಕ್ಕೆ ಸಿದ್ಧವಾಗಿದೆ. 28 ವರ್ಷಗಳ ಹಿಂದೆ ಇಲ್ಲಿ ನಡೆದಿದ್ದ ಮಹಾ ಕಲಾ ಪ್ರವಾಹ ಮತ್ತೆ ಇಲ್ಲಿ ಅನುರಣಿಸಲಿದೆ. ಮಹಾನ್ ಕಲಾಮೇಳದ ಆರಂಭಕ್ಕೆ ಇನ್ನು ಉಳಿದಿರುವುದು 9 ದಿನಗಳು ಮಾತ್ರ.
      ಈ ನಿಟ್ಟಿನಲ್ಲಿ ಜಿಲ್ಲೆಗೆ ಆಗಮಿಸಲಿರುವ ಅತಿಥಿಗಳನ್ನು ಯಾವ ರೀತಿ ಸ್ವಾಗತಿಸಬಹುದು ಎಂಬ ಯೋಜನೆ-ಯೋಚನೆಗಳೊಂದಿಗೆ ಜಿಲ್ಲೆಯ ಜನ ಭೇದ-ಭಾವ ಮರೆತು ಕೈಜೋಡಿಸಿದ್ದಾರೆ. ಕನ್ನಡ, ತುಳು,ಮಲೆಯಾಳಂ ಭಾಷೆಗಳ ವ್ಯತ್ಯಾಸಗಳಿಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಮಂದಿಯನ್ನು ಭವ್ಯವಾಗಿ ಸ್ವಾಗತಿಸಿ, ಗಡಿನಾಡ ವೈವಿಧ್ಯವನ್ನು ಅವರಿಗೆ ತೋರುವ ನಿಟ್ಟಿನಲ್ಲಿ ವ್ಯವಸ್ಥೆಗಳು ಭರದಿಂದ ಸಾಗುತ್ತಿವೆ.
   Àಂದ್ರಗಿರಿ ನದಿಯ ದಕ್ಷಿಣ ಭಾಗದ ಕಾಞಂಗಾಡು ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ನ.28ರಿಂದ ಡಿ.1 ವರೆಗೆ ಈ ಕಲೋತ್ಸವ ಜರುಗಲಿದೆ. ತುಳುನಡಿನ ಪುಂಡಿಯಿಂದ ತೊಡಗಿ ಗೋಳಿಬಜೆ, ಪೆÇೀಡಿಯ ವರೆಗೆ, ಪಾಯಸದಿಂದ ಹಿಡಿದು ಹೋಳಿಗೆ ವರೆಗೆ, ಕಾಸರಗೋಡು ಸೀರೆಯಿಂದ ತೊಡಗಿ ತಳಂಗರೆ ಟೊಪ್ಪಿ ವರೆಗೆ ಸಾಂಸ್ಕøತಿಕ ವಿವಿಧತೆಯನ್ನು ಈ ವೇಳೆ ನಾಡು ತೆರೆದಿಡಲಿದೆ.
     28 ವರ್ಷಗಳ ಹಿಂದೆ ಇಲ್ಲಿ ನಡೆದಿದ್ದ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ವೇಳೆ ಇಲ್ಲಿನ ಆತಿಥ್ಯ, ಭಾಷಾ, ಸಂಸ್ಕೃತಿಯ ವಿವಿಧತೆಗಳೇ ಇತರರಿಗೆ ಆಕಷರ್ಣೆಯಾಗಿದ್ದುವು. ಅದಕ್ಕಿಂತಲೂ ಹಲವು ಪಟ್ಟು ಅಧಿಕ ವ್ಯವಸ್ಥೆಗಳೊಂದಿಗೆ ಈ ಬಾರಿಯ ಕಲೋತ್ಸವ ಸಿದ್ಧಗೊಳ್ಳುತ್ತಿದೆ. 28 ವೇದಿಕೆಗಳಲ್ಲಿ ಕಲೆಗಳ ಮಹಾಪೂರ ಪ್ರಸ್ತುತಗೊಳ್ಳಲಿದ್ದರೆ, ಸ್ಥಳೀಯ ಮನೆಗಳು ಅತಿಥಿಗಳ ಸ್ವಾಗತಕ್ಕೆ ಸಜ್ಜುಗೊಂಡಿವೆ. ಕಾಸರಗೋಡಿನ ಅತಿಥಿ ಸತ್ಕಾರಕ್ಕೆ ಮತ್ತೆ ಕಲೋತ್ಸವ ಕೈಗನ್ನಡಿಯಾಗಲಿದೆ.
ರಾಜ್ಯ ಮಟ್ಟದ ಶಾಲಾ ಕಲೋತ್ಸವ: ವೈಭವದ ಜೊತೆಗೆ ಶುಚೀಕರಣಕ್ಕೂ ಆದ್ಯತೆ
      ವೈಭವದ ಜೊತೆಗೆ ಶುಚಿತ್ವದ ವಿಚಾರದಲ್ಲೂ ಈ ಬಾರಿಯ ರಾಜ್ಯ ಮಟ್ಟದ ಶಾಲಾ ಕಲೋತ್ಸವ ಇತರರಿಗೆ ಮಾದರಿಯಾಗಲಿದೆ. ಕುಟುಂಬಶ್ರೀ ಸ್ವಸಹಾಯ ಸಂಘದ ಕಾರ್ಯಕರ್ತರು ಈ ನಿಟ್ಟಿನಲ್ಲಿ ಅಹೋರಾತ್ರಿಯ ಯತ್ನ ನಡೆಸುತ್ತಿದ್ದಾರೆ. ಕಲೋತ್ಸವ ನಡೆಯುವ ವೇದಿಕೆಗಳು, ಚಪ್ಪರಗಳು ಮತ್ತು ಅವುಗಳ ಆಸುಪಾಸಿನ ಪ್ರದೇಶಗಳು, ವಿದ್ಯಾರ್ಥಿಗಳು ಮತ್ತು ಪೆÇೀಷಕರು ತಗುವ ತಾಣಗಳ ಪರಿಸರವನ್ನು ಶುಚಿಯಾಗಿರಿಸುವ ನಿಟ್ಟಿನಲ್ಲಿ ಹಸುರು ಸಂಹಿತೆಯ ದೌತ್ಯ ಹೊತ್ತುಕೊಂಡು ಇವರು ದುಡಿಮೆ ನಡೆಸಲು ಸಜ್ಜಾಗಿದ್ದಾರೆ. ಕಾಞಂಗಾಡ್ ನಗರಸಭೆ ವ್ಯಾಪ್ತಿಯ ಎರಡು ಸಿ.ಡಿ.ಎಸ್.ಗಳಿಂದ ಸುಮಾರು 80  ಹರಿತ ಕ್ರಿಯಾ ಸೇನೆ ಸದಸ್ಯರು ಶುಚೀಕರಣದ ಚಟುವಟಿಕೆಗಳಿಗೆ ನೇಮಕಗೊಂಡಿದ್ದಾರೆ. ಕಲೋತ್ಸವ ಆರಂಭಕ್ಕೆ ಎರಡು ದಿನಗಳ ಮುನ್ನವೇ (ನ.26ರಿಂದಲೇ) ಇವರು ಕರ್ತವ್ಯಕ್ಕೆ ಹಾಜರಾಗುವರು. ಡಿ.2 ವರೆಗೆ ಇವರ ಕರ್ತವ್ಯ ಉಂದುವರಿಯುವುದು. ವೇದಿಕೆ, ಚಪ್ಪರ, ಶೌಚಾಲಯ, ತಂಗುವ ತಾಗಳು ಇತ್ಯಾದಿಗಳ ಶುಚೀಕರಣ ಪ್ರತಿದಿನ ಆಗಾಗ ನಡೆಯಲಿದೆ. ಪ್ರತಿಯೊಂದು ಕಡೆ ಬೆಳಗ್ಗೆ, ಮಧ್ಯಾಹ್ನ , ಸಂಜೆ, ರಾತ್ರಿ ತಲಾ ಇಬ್ಬರಿರುವ ಮೂರು ತಂಡ ದಿನಂಪತ್ರಿ ಶುಚೀಕರಣ ನಡೆಸಲಿದೆ. ಕ್ರಿಯಾ ಸೇನೆಗೆ ಬೇಕಾದ ಶುಚೀಕರಣ ಸಲಕರಣೆ ಕಲೋತ್ಸವ ಕಲ್ಯಾಣ ಸಮಿತಿ ಒದಗಿಸಲಿದೆ. ಕಲೋತ್ಸವ ಮುಕ್ತಾಯಗೊಂಡನಂತರ ಡಿ.2ರಂದು ವಹಿಸಿಕೊಂಡ ಆಯಾ ಕೇಂದ್ರಗಳನ್ನು ಸಮಗ್ರ ಶುಚೀಕರಣಗೊಳಿಸಿದನಂತರವೇ ಅಧಿಕಾರಿಗಳು ಇವರನ್ನು ಬೀಳ್ಕೊಡಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries