HEALTH TIPS

ಪ್ರಕೃತಿ ಸ್ನೇಹಿಯಾಗಿ ನಡೆಯಲಿರುವ ರಾಜ್ಯ ಮಟ್ಟದ ಶಾಲಾ ಕಲೋತ್ಸವ: ಮುಳ್ಳೇರಿಯ ಶಾಲಾ ಮಕ್ಕಳಿಂದ ಬಟ್ಟೆ ಚೀಲ ಕೊಡುಗೆ

   
    ಮುಳ್ಳೇರಿಯ: ರಾಜ್ಯ ಮಟ್ಟದ ಶಾಲಾ ಕಲೋತ್ಸವ ಜಿಲ್ಲೆಯ ಕಾಞಂಗಾಡ್ ಮತ್ತು ಆಸುಪಾಸಿನ ಪ್ರದೇಶಗಳ 28 ವೇದಿಕೆಗಳಲ್ಲಿ ನಡೆಯುವ ವೇಳೆ ಹಸುರು ಸಂಹಿತೆಯೊಂದಿಗೆ ಈ ಕಲಾ ಉತ್ಸವ ನಡೆಸುವತ್ತ ಆದ್ಯತೆ ನೀಡಲಾಗುತ್ತಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಪೂರ್ಣ ರೂಪದಲ್ಲಿ ತ್ಯಜಿಸಿ, ಬಟ್ಟೆಯ ಚೀಲ ಸಹಿತ ಪ್ರಕೃತಿ ಸ್ನೇಹಿ ಸಾಮಾಗ್ರಿಗಳನ್ನು ಕಡ್ಡಾಯವಾಗಿ ಬಳಸಲು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದ್ದಾರೆ. ಇದರ ಅಂಗವಾಗಿ ಶಾಲೆಯೊಂದರ ಮಕ್ಕಳು ಕಲೋತ್ಸವದಲ್ಲಿ ಬಳಸುವ ನಿಟ್ಟಿನಲ್ಲಿ ಸುಮಾರು 300 ಬಟ್ಟೆಯ ಚೀಲಗಳನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದ್ದಾರೆ.
      ಮುಳ್ಳೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್, ಪೆನ್ ಫ್ರೆಂಡ್ ಯೋಜನೆ ಸದಸ್ಯರು, ಬಳಕೆಯಿಲ್ಲದ ಪೆನ್ ಗಳನ್ನು ಸಂಗ್ರಹಿಸಿ, ಗುಜರಿಗೆ ಮಾರಾಟ ಮಾಡಿ ಲಭಿಸಿದ ಮೊಬಲಗಿಗೆ, ಶಾಲೆಯ ರಕ್ಷಕ-ಶಿಕ್ಷಕ ಸಂಘದ ನಿಧಿಯನ್ನೂ ಸೇರಿಸಿ ಬಟ್ಟೆ ಚಿಲಗಳನ್ನು ತಯಾರಿಸಿದ್ದು, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಚೀಲಗಳನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಹಸ್ತಾಂತರಿಸಿದ್ದಾರೆ.
       ಉಪಜಿಲ್ಲಾ ಮಟ್ಟದ, ಸಬ್ ಜಿಲ್ಲಾ ಮಟ್ಟದ ಕಲೋತ್ಸವದಲ್ಲೂ ಈ ಶಾಲೆಯ ಮಕ್ಕಳು ಬಟ್ಟೆ ಚೀಲ ತಯಾರಿಸಿ ವಿತರಣೆ ನಡೆಸಿದ್ದರು. ಈ ಶಾಲೆಯ ಇಕೋ ಕ್ಲಬ್  ನೇತೃತ್ವದಲ್ಲಿ ಕಳೆದ ವರ್ಷ ನಡೆಸಿದ ಪ್ಲಾಸ್ಟಿಕ್ ಪಾಳು ವಸ್ತು ಸಂಗ್ರಹ ಕರ್ಯಕ್ರಮದಲ್ಲಿ 250 ಕಿಲೋ ಪಾಳುವಸ್ತು ಸಂಗ್ರಹವಾಗಿತ್ತು. ತದನಂತರ ನಡೆಸಿದ ಪ್ರಕೃತಿ ಸ್ನೇಹಿ ಚಟುವಟಿಕೆಗಳಿಗೆ ಈ ಕಾಯಕ ಪ್ರೇರೆಯಾಗಿತ್ತು. ಶಾಲೆಯ ಮುಖ್ಯ ಶಿಕ್ಷಕ ಎ.ಅಶೋಕ್ ಅರಳಿತ್ತಾಯ, ಇಕೋ ಕ್ಲಬ್ ಸಂಚಾಲಕಿ ಎಂ.ಸಾವಿತ್ರಿ, ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಎ.ಪದ್ಮನಾಭ, ಇಕೋ ಕ್ಲಬ್ ಸದಸ್ಯರಾದ ಬಿ.ಯದುಕೃಷ್ಣನ್, ಸಿ.ಎಚ್.ಸುಭಾಷ್ ಚೀಲ ಹಸ್ತಾಂತರ ವೇಳೆ ಜತೆಗಿದ್ದರು.
ಸ್ಪರ್ಧಾಳು ಬರಿಹೊಟ್ಟೆಯಲ್ಲಿ ಮರಳಕೂಡದು: ಲಭಿಸಲಿದೆ ಭೋಜನ ಪೆÇಟ್ಟಣ
         ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿದ ನಂತರ ಊರಿಗೆ ಮರಳುವವರು ಬರಿದಾದ ಹೊಟ್ಟೆಯಲ್ಲಿ ಪ್ರಯಾಣ ಬೆಳೆಸಬಾರದು ಎಂಬ ಕಾಳಜಿಯನ್ನು ಇಲ್ಲಿನಾಹಾರ ಸಮಿತಿ ಹೊಂದಿದೆ. ಇದರ ಅಂಗವಾಗಿ ಮರಳುವವರಿಗೆ ಆಹಾರವನ್ನು ಪೆÇಟ್ಟಣದಲ್ಲಿ ಕಟ್ಟಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪೆÇಟ್ಟಣದಲ್ಲಿ ಭೋಜನದಲ್ಲಿ ವೈವಿಧ್ಯತೆಯೂ ಇರುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries