ಕಾಸರಗೋಡು: ಕನ್ನಡ ಹೋರಾಟ ಸಮಿತಿಯ ಸಭೆ ನ.24 ರಂದು ಭಾನುವಾರ ಮಧ್ಯಾಹ್ನ 2.30 ಕ್ಕೆ ಬ್ಯಾಂಕ್ ರಸ್ತೆಯ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನ ಎಂ.ಗಂಗಾಧರ ಭಟ್ ವೇದಿಕೆಯಲ್ಲಿ ಜರಗಲಿದೆ.
ಪ್ರಸ್ತುತ ಕನ್ನಡಿಗರು ಸಂಘಟಿತರಾಗಿ ಹೋರಾಡುವ ಮೂಲಕ ಹಲವು ಸಮಸ್ಯೆಗಳಿಗೆ ಧನಾತ್ಮಕವಾದ ಸ್ಪಂದನ ಲಭಿಸುತ್ತಿದ್ದರೂ, ಇಲ್ಲಿನ ಮಲೆಯಾಳಿ ಅಧಿಕಾರಿಗಳು ಅದನ್ನು ಉದ್ದೇಶಪೂರ್ವಕವಾಗಿ ಮೊಟಕುಗೊಳಿಸುವ ಕೃತ್ಯ ನಡೆಸುತ್ತಿದ್ದಾರೆ.
ಈ ಕುರಿತು ತೀವ್ರವಾದ ಹೋರಾಟ ನಡೆಸಲು ಕನ್ನಡಿಗರು ಮತ್ತೊಮ್ಮೆ ಸಿದ್ಧರಾಗಬೇಕು. ನ.24 ರಂದು ಜರಗಲಿರುವ ಸಭೆಯಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಸಭೆಯಲ್ಲಿ ಕನ್ನಡ ಪರ ಸಂಸ್ಥೆಗಳ ಪದಾಧಿಕಾರಿಗಳು, ಅಧ್ಯಾಪಕರು, ನಿವೃತ್ತ ಕನ್ನಡ ನೌಕರರು, ಉದ್ಯೋಗಾರ್ಥಿಗಳು, ಪರೀಕ್ಷಾರ್ಥಿಗಳು, ಕನ್ನಡ ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿ ಯಶಸ್ವಿಗೊಳಿಸಬೇಕೆಂದು ಕನ್ನಡ ಹೋರಾಟ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

