HEALTH TIPS

ರಾಜ್ಯಮಟ್ಟದ ಶಾಲಾ ಕಲೋತ್ಸವ- ಪ್ರಚಾರ ಅಂಗವಾಗಿ ಮಕ್ಕಳಿಂದ ಪಂಚವಾದ್ಯ ಮೇಳ ಪರ್ಯಟನೆ


      ಕಾಸರಗೋಡು: ಜಿಲ್ಲೆಯಲ್ಲಿ ಎರಡು ದಶಕಗಳ ನಂತರ ನಡೆಯುತ್ತಿರುವ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಪ್ರಚಾರ ಕಾರ್ಯದಲ್ಲಿ ಪುಟ್ಟಮಕ್ಕಳೂ ತಮ್ಮದೇ ಶೈಲಿಯಲ್ಲಿ ಕೊಡುಗೆ ನೀಡಲಿದ್ದಾರೆ. 60 ಮಕ್ಕಳ ತಂಡವೊಂದು ನ.23ರಂದು `ಪಂಜಾರಿ ಮೇಳ(ಪಂಚವಾದ್ಯಗಳ ಮೇಳ)' ಪರ್ಯಟನೆ ಮೂಲಕ ವಿವಿಧ ಕೇಂದ್ರಗಳಲ್ಲಿ ಕಲೋತ್ಸವದ ಪ್ರಚಾರ ನಡೆಸಲಿದೆ. ಕಲೋತ್ಸವದ ಪ್ರಚಾರ ಸಮಿತಿಯ ನೇತೃತ್ವದಲ್ಲಿ  ಈ ಪರ್ಯಟನೆ ಜರುಗಲಿದೆ.                 
       ಉತ್ತಮ ತರಬೇತಿ ಪಡೆದಿರುವ ಮೇಲಾಂಗೋಟ್ ಎ.ಸಿ.ಕಣ್ಣನ್ ನಾಯರ್ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 60 ಮಕ್ಕಳು ಕಾಂಞಂಗಾಡ್‍ನಿಂದ ನೀಲೇಶ್ವರ ವರೆಗಿನ ವಿವಿಧ ಕೇಂದ್ರಗಳಲ್ಲಿ ಈ ವಾದನ ಪರ್ಯಟನೆ ನಡೆಸುವರು. 23ರಂದು ಮಧ್ಯಾಹ್ನ 2.30ಕ್ಕೆ ಇಕ್ಬಾಲ್ ಶಾಲೆ ಆವರಣದಲ್ಲಿ ಈ ಪರ್ಯಟನೆ ಆರಂಭಗೊಳ್ಳಲಿದೆ. 3.30ಕ್ಕೆ ವೆಳ್ಳಿಕೋತ್‍ನಲ್ಲಿ, ಸಂಜೆ 4.15ಕ್ಕೆ ಕಾಂಞಂಗಾಡ್ ಪೆಟ್ರೋಲ್ ಬಂಕ್ ಬಳಿ, 5 ಗಂಟೆಗೆ ಮಾಂತೋಪ್, 5.45ಕ್ಕೆ ನೀಲೇಶ್ವರ ಎಂಬ ಕೇಂದ್ರಗಳಲ್ಲಿ ಚೆಂಡೆ ಸಹಿತ ವಾದನಗಳ ಮೇಳ ನಡೆಸಲಿದ್ದು, 6.30ಕ್ಕೆ ನೀಲೇಶ್ವರದ ಐಂಙõÉೂೀತ್‍ನಲ್ಲಿ ಸಮಾಪ್ತಿಗೊಳ್ಳಲಿದೆ.   
     ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಗಳಿಗೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಇಲ್ಲದೇ ಇದ್ದರೂ, ಈ ಮಹಾ ಕಲಾಸಂಗಮದ ಪ್ರಚಾರಾರ್ಥ ಪರ್ಯಟನೆ ನಡೆಸುವ ಸೌಭಾಗ್ಯ ಇಲ್ಲಿನ ಮಕ್ಕಳಿಗೆ ಒದಗಿಬಂದಿದೆ. ಈ ತಂಡದಲ್ಲಿ 4ನೇ ತರಗತಿಯ ವಿದ್ಯಾರ್ಥಿಗಳಿಂದ 7 ನೇ ತರಗತಿ ವರೆಗಿನ ಮಕ್ಕಳು ಭಾಗವಹಿಸುತ್ತಿದ್ದಾರೆ. ಕೇರಳ ಕ್ಷೇತ್ರ ಕಲಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಮಡಿಕೈ ಉಣ್ಣಿಕೃಷ್ಣನ್ ಮಾರಾರ್, ಮಣಿಕಂಠನ್ ಮಾರಾರ್ ಉಪ್ಪಿಲಿಕೈ, ಹರೀಶ್ ಮಾರಾರ್ ಮಡಿಕೈ  ಅವರ ನೇತೃತ್ವದಲ್ಲಿ ಕಳೆದ ಒಂದು ತಿಂಗಳಿಂದ ಈ ಬಗ್ಗೆ ತರಬೇತಿ ನೀಡಲಾಗುತ್ತಿದೆ.
                          (ಚಿತ್ರ ಮಾಹಿತಿ : ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries