ಕಾಸರಗೋಡು: ಕೆ.ಟಿ.ಗಿರಿಧರ ಗುರುಸ್ವಾಮಿ ಅವರ ಸ್ಮರಣಾರ್ಥ ಅವರ ಶಿಷ್ಯವೃಂದ ಹಾಗು ಭಕ್ತರು ಸೇರಿ ನೂತನವಾಗಿ ಅಡ್ಕತ್ತಬೈಲಿನಲ್ಲಿ ನಿರ್ಮಿಸಿದ ಗುರುಭವನ ಉದ್ಘಾಟನೆ ನ.23 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ, 7.30 ರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಛಾಯಾಚಿತ್ರ ಪ್ರತಿಷ್ಠಾಪನೆ, 10 ರಿಂದ ಭಜನೆ ಜರಗಲಿದೆ. 11.30 ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಅಯ್ಯಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಮನೋಹರ ಅಧ್ಯಕ್ಷತೆ ವಹಿಸುವರು. ಸುಬ್ರಹ್ಮಣ್ಯ ಭಜನಾ ಮಂದಿರದ ಅಧ್ಯಕ್ಷ ಆರ್.ಕೆ.ರಾಜೇಶ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್, ಉಪನ್ಯಾಸಕ ಅರುಣ್ ಉಳ್ಳಾಲ್ ಭಾಗವಹಿಸುವರು. ಕೆ.ಪಿ.ಬಾಲಸುಬ್ರಹ್ಮಣ್ಯ ಗುರುಸ್ವಾಮಿ ಉಪಸ್ಥಿತರಿರುವರು. ಡಾ.ಎ.ವಿ.ಸುರೇಶ್, ಕೃಷ್ಣನ್, ವಿನಯನ್, ಚಂದ್ರಶೇಖರ ಶುಭಹಾರೈಸುವರು. ಮಧ್ಯಾಹ್ನ 1 ರಿಂದ ಅನ್ನದಾನ, ಸಂಜೆ 7 ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

