ಉಪ್ಪಳ: ಹಾಲು ಅಭಿವೃದ್ಧಿ ಇಲಾಖೆ, ಜಿಲ್ಲಾಮಟ್ಟದ ಹಾಲಿನ ಗುಣಮಟ್ಟ ನಿಯಂತ್ರಣ ಘಟಕ ವತಿಯಿಂದ ಪೈವಳಿಕೆ ಹಾಲು ಉತ್ಪಾದಕರ ಸಹಕರಿ ಸಂಘ ಜಂಟಿ ವತಿಯಿಂದ ಹಾಲು ಉತ್ಪಾದಕರಿಗಾಗಿ ಹಾಲಿನ ಗುಣಮಟ್ಟ ಸಂಬಂಧ ಜಾಗೃತಿ ಕಾರ್ಯಕ್ರಮ ನ.22ರಂದು ಬೆಳಗ್ಗೆ 10 ಗಂಟೆಗೆ ಪೈವಳಿಕೆ ಗ್ರಾಮ ಪಂಚಾಯತ್ ಕುಟುಂಬಶ್ರೀ ಸಭಾಂಗಣದಲ್ಲಿ ನಡೆಯಲಿದೆ. ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಉದ್ಘಾಟಿಸುವರು. ಉಪಾಧ್ಯಕ್ಷ ವಲ್ಟಿ ಡಿ'ಸೋಜಾ ಅಧ್ಯಕ್ಷತೆ ವಹಿಸುವರು. ಹಾಲು ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಷಾಂಟಿ ಅಬ್ರಹಾಂ ಸಮನ್ವಯಕಾರರಾಗಿರುವರು. ಡಿ.ಕೆ.ಎಂ.ಪಿ.ಯು. ನಿವೃತ್ತ ಸಹಾಯಕ ಪ್ರಬಂಧಕ ಸುಬ್ಬ ರಾವ್, ಹಾಲು ಅಭಿವೃದ್ಧಿ ಇಲಾಖೆ ಗುಣಮಟ್ಟ ನಿಯಂತ್ರಣ ಅ„ಕಾರಿ ಎಸ್.ಮಹೇಶ್ ನಾರಾಯಣನ್ ತರಗತಿ ನಡೆಸುವರು.


