ಉಪ್ಪಳ: ಮಣಿಪಾಲ ತಾಂತ್ರಿಕ ಮಹಾ ವಿದ್ಯಾಲಯದ(ಎಂಐಟಿ) ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅನಂತಕೃಷ್ಣ ಟಿ.ಅವರಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್(ಮಾಹೆ) ಯು ಪಿ.ಎಚ್.ಡಿ.ಪದವಿಯನ್ನು ನೀಡಿ ಗೌರವಿಸಿದೆ.
ಎಂ.ಐ.ಟಿಯ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಪ್ರಾಧ್ಯಾಪಕ ಡಾ. ಕುಮಾರ ಶ್ಯಾಮ ಅವರ ಮಾರ್ಗದರ್ಶನದಲ್ಲಿ ಅಟೋಮ್ಯಾಟಿಕ್ ಸ್ವಿಚ್ ಟು ಟೆಕ್ಟ್ಸ್ ಟ್ರಾನ್ಸಿಪ್ಶನ್ ಫಾರ್ ಕನ್ನಡ ಲ್ಯಾಂಗ್ವೇಜ್ ಎಂಬ ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ.ಲಭಿಸಿದೆ. ಇವರು ಪೈವಳಿಕೆ ಸಮೀಪದ ಬಾಯಾರು ದಿ.ರಾಮಕೃಷ್ಣ ಭಟ್ ಹಾಗೂ ತಿರುಮಲೇಶ್ವರಿ ದಂಪತಿಗಳ ಪುತ್ರರಾಗಿದ್ದಾರೆ.


