ಕಾಸರಗೋಡು: ವಿವಿಧ ಬೇಡಿಕೆ ಮು0ದಿರಿಸಿ ನವೆಂಬರ್ ಇಂದಿನಿಂದ(22ರಿಂದ) ಆರಂಭಿಸಲುದ್ದೇಶಿಸಿದ್ದ ಖಾಸಗಿ ಬಸ್‍ಗಳ ಅನಿರ್ಧಿಷ್ಟಾವಧಿ ಮುಷ್ಕರ ಹಿಂತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನ. 20ರಂದು ನಡೆಸಲುದ್ದೇಶಿಸಿರುವ ಸೂಚನಾಮುಷ್ಕರವನ್ನೂ ಕೈಬಿಡಲಾಗಿದೆ.
ಖಾಸಗಿ ಬಸ್ ಮಾಲಿಕರ ಸಂಘಟನೆಗಳ ಪ್ರತಿನಿಧಿಗಳ ಜತೆ ಸಾರಿಗೆ ಖಾತೆ ಸಚಿವ ಎ.ಕೆ ಶಶೀಂದ್ರನ್ ನಡೆಸಿದ ಮಾತುಕತೆಯನ್ವಯ ಮುಷ್ಕರ ಕೈಬಿಡಲಾಗಿದೆ. ಬಸ್ ಟಿಕೆಟ್ ಕನಿಷ್ಠ ದರ 10ರೂ.ಗೆ ಏರಿಸಬೇಕು, ವಿದ್ಯಾರ್ಥಿಗಳ ರಿಯಾಯಿತಿ ದರ ಕನಿಷ್ಠ 5ರೂ. ಆಗಿ ಹೆಚ್ಚಿಸಬೇಕು ಸಹಿತ ವಿವಿಧ ಬೇಡಿಕೆ ಮುಂದಿರಿಸಿ ಮುಷ್ಕರಕ್ಕೆ ಆಹ್ವಾನ ನೀಡಲಾಗಿತ್ತು. ವಿದೇಶ ಪ್ರಯಾಣ ಕೈಗೊಳ್ಳಲಿರುವ ಸಿಎಂ ಪಿಣರಾಯಿ ವಇಜಯನ್ ಕೇರಳಕ್ಕೆ ವಾಪಸಾದ ನಂತರ ಡಿ.4ರಂದು ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದರು.

