ಕಾಸರಗೋಡು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಹಿಳಾ ಘಟಕದ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಮಹಿಳಾ ಸಂಗಮ ಕಾರ್ಯಕ್ರಮ ಮಂಗಳವಾರ ಕಾಸರಗೋಡು ನಗರಸಭಾ ಟೌನ್‍ಹಾಲ್ ಸಭಾಂಗಣದಲ್ಲಿ ಜರುಗಿತು.
ಸಂಘಟನೆ ರಾಜ್ಯಸಮಿತಿ ಉಪಾಧ್ಯಕ್ಷೆ ರಬೆಕಾ ಜಾರ್ಜ್ ಸಂಗಮ ಉದ್ಘಾಟಿಸಿ ಮಾತನಾಡಿ, ರಾಜ್ಯದ ಅಭಿವೃದ್ಧಿಯಲ್ಲಿ ವ್ಯಾಪಾರಿ ಸಂಘಟನೆಗಳ ಪಾತ್ರ ನಿರ್ಣಾಯಕವಾಗಿದ್ದು, ಸಂಘಟನೆಯ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುವಂತಾಗಬೇಕು. ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿಅಭಿವೃದ್ಧಿಪಡಿಸುವ ಸಂದರ್ಭ ತೆರವುಗೊಳಿಸುವ ವ್ಯಾಪಾರಿಗಳಿಗೆ ಸೂಕ್ತ ನಷ್ಟಪರಿಹಾರದ ಜತೆಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.
್ಲಸಮಿತಿ ಅಧ್ಯಕ್ಷೆ ಶೆರ್ಲಿ ಸೆಬಾಸ್ಟಿಯನ್ ಅಧ್ಯಕ್ಷತೆ ವಹಿಸಿದ್ದು. ವ್ಯಾಪಾರಿ ವ್ಯವಸಾಯಿ ಏಕೋಪನಾಸಮಿತಿ ರಾಜ್ಯಘಟಕ ಉಪಾಧ್ಯಕ್ಷ ಕೆ. ಅಹಮ್ಮದ್ ಶೆರೀಫ್, ಮಹಿಳಾ ಸಂಘಟನೆ ರಾಜ್ಯಸಮಿತಿ ಪದಾಧಿಕಾರಿ ಶಿನಜಾಪ್ರದೀಪ್, ಜಮೀಲಾ ಇಸ್ಸುದ್ದೀನ್ ಮುಂತಾದವರು ಪಾಲ್ಗೊಂಡಿದ್ದರು. ಶಿಫಾನಿ ಮುಜೀಬ್ ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮಕ್ಕೆ ಮೊದಲು ನಡೆದ ಆಕರ್ಷಕ ಮೆರವಣಿಗೆಯನ್ನು ಸಂಘಟನೆ ರಾಜ್ಯ ಸಮಿತಿ ಉಪಾಧ್ಯಕ್ಷ ಕೆ. ಅಹಮ್ಮದ್ ಶೆರೀಫ್ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಬ್ಯಾಂಡ್ ಮೇಳ, ಆಕಷಕ ಸ್ತಬ್ಧಚಿತ್ರ ಗಮನಸೆಳೆಯಿತು. ಜಿಲ್ಲೆಯ ವಿವಿಧ ಮಹಿಳಾ ಘಟಕಗಳಿಂದ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

