HEALTH TIPS

ಚೆರ್ಕಳ-ಕಲ್ಲಡ್ಕ ರಸ್ತೆಯ ಶೋಚನೀಯಾವಸ್ಥೆ-ಬಸ್ ಸಂಚಾರ ಸ್ಥಗಿತಗೊಳಿಸಲು ಸಂಘಟನೆ ತೀರ್ಮಾನ

   
    ಕಾಸರಗೋಡು: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯಲ್ಲಿ ಪಳ್ಳತ್ತಡ್ಕದಿಂದ ಚೆರ್ಕಳ ವರೆಗೆ ರಸ್ತೆ ಶಿಥಿಲಾವಸ್ಥೆಯಲ್ಲಿದ್ದು, ಬಸ್‍ಗಳಿಗೆ ಸಂಚರಿಸಲಾಗದಷ್ಟು ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಈ ಹಾದಿಯಾಗಿ ಖಾಸಗಿ ಬಸ್ ಸಂಚಾರವನ್ನು ನ. 25ರಿಂದ ನಿಲುಗಡೆಗೊಳಿಸಲು ತೀರ್ಮಾನಿಸಿರುವುದಗಿ ಖಾಸಗಿ ಬಸ್ ಓಪರೇಟರ್ಸ್ ಫೆಡರೇಶನ್ ಪ್ರಕಟಣೆ ತಿಳಿಸಿದೆ.
     ರಸ್ತೆ ಶಿಥಿಲಾವಸ್ಥೆ ಪರಿಹರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಗಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಾದಿಯಾಗಿ ಸಂಚರಿಸುವ ಖಾಸಗಿಬಸ್‍ಗಳು ವ್ಯಾಪಕ ನಷ್ಟ ಅನುಭವಿಸುತ್ತಿದ್ದು, ಇನ್ನು ಮುಂದೆ ನಷ್ಟದ ಪ್ರಮಾಣ ಸಹಿಸಲು ಸಾಧ್ಯವಾಗದ ಸ್ಥಿತಿಯಿರುವುದಾಗಿ ಬಸ್ ಮಾಲಿಕರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries