ಪೆರ್ಲ:ಪಡ್ರೆ ತೋಡಿನ ಪುನರುತ್ಥಾನ, ತೋಡಿನಲ್ಲಿ ವರ್ಷಪೂರ್ತಿ ನೀರು ಹರಿಸುವ ಕ್ರಿಯಾ ಯೋಜನೆಯೊಂದಿಗೆ 'ನೀರ ನೆಮ್ಮದಿಯತ್ತ ಪಡ್ರೆ' ಜಲಯೋಧರ ತಂಡದ ನೇತೃತ್ವದಲ್ಲಿ ಸ್ವರ್ಗ-ಪೆÇಯ್ಯೆ ಮತ್ತು ಪಡ್ಪು- ಪೆÇಯ್ಯೆ ತೋಡುಗಳಲ್ಲಿ ಈ ಹಿಂದೆ ಕಟ್ಟಲಾಗುತ್ತಿದ್ದ ಕಟ್ಟುತ್ತಿದ್ದ ಕಟ್ಟಗಳ ಪುನರಚನೆ, ಪ್ರಥಮ ಕಟ್ಟವನ್ನು ಉತ್ಸವ ರೂಪದಲ್ಲಿ ನಿರ್ಮಿಸುವ, ಸರಣಿ ಕಟ್ಟ ನಿರ್ಮಾಣದ ಭಾಗವಾಗಿ ಸೋಮವಾರ 'ಕಟ್ಟ ನೋಡೋಣು ಬನ್ನಿ' ಕ್ರಿಯಾ ಚಟುವಟಿಕೆಗೆ ಚಾಲನೆ ನೀಡಲಾಯಿತು.
ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಳದ ಪ್ರಧಾನ ಅರ್ಚಕ, ವೇ.ಮೂ.ಮಧುಸೂದನ ಪುಣಿಚಿತ್ತಾಯ ಅವರ ನೇತೃತ್ವ, ಪಳ್ಳತ್ತಮೂಲೆ ಶ್ರೀರಾಮ ಭಟ್ ಅವರ ಸಹಯೋಗದಲ್ಲಿ ಪಳ್ಳತಮೂಲೆ ಕಟ್ಟಸ್ಥಾನದಲ್ಲಿ ಗಣಪತಿ ಪೂಜೆ, ಭೂಮಿಪೂಜೆ, ಪ್ರಾರ್ಥನೆ ನೆರವೇರಿಸಿ ಆರಂಭಿಕ ಚಟುವಟಿಕೆಗೆ ಚಾಲನೆ ನೀಡಲಾಯಿತು.
ಜಲತಜ್ಞ ಶ್ರೀಪಡ್ರೆ, ನಿವೃತ್ತ ವಿದ್ಯಾಧಿಕಾರಿ ಸತ್ಯನಾರಾಯಣ ಭಟ್, ಸ್ವರ್ಗ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ. ವೈ.ಸುಬ್ರಹ್ಮಣ್ಯ ಭಟ್, ಶ್ರೀಹರಿ ಭಟ್ ಸಜಂಗದ್ದೆ, ಜಗದೀಶ್ ಕುತ್ತಾಜೆ, ಶಿವ ಪ್ರಕಾಶ್ ಪಾಲೆಪ್ಪಾಡಿ, ನಾಗರಾಜ್ ಬಾಳಿಕೆ, ಶ್ರೀಹರಿ ಭರಣೇಕರ್, ಜಗದೀಶ್ ಸೈಪಂಗಲ್ಲು, ಗಣಪತಿ ಭಟ್ ವಿಘ್ನೇಶ್ ಶಿರಂತಡ್ಕ, ಟಿ.ನಾರಾಯಣ ಭಟ್, ಕೃಷ್ಣ ಎ.ಜೆ., ಶ್ರೀಗಣೇಶ್ ಬದಿ ಮತ್ತಿತರರಿದ್ದರು.


