ಪೆರ್ಲ: ದಾಸಸಂಕೀರ್ತನಕಾರ, ಭಜನಾ ಸಂಘಟಕ, ದಾಸ ಸಾಹಿತ್ಯ ಪ್ರಚಾರಕ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜ.2 ರಂದು ಗುರುವಾರ ಉಡುಪಿ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ವೈದಿಕ ವಿಧಿವಿಧಾನಗಳೊಂದಿಗೆ ಹರಿದಾಸ ದೀಕ್ಷಾ ವಿಧಿ ಪ್ರದಾನ ಮಾಡಲಿದ್ದಾರೆ.
ಬೆಳಗ್ಗೆ 7 ಕ್ಕೆ ಹರಿದಾಸ ದೀಕ್ಷಾ ವಿಧಿ ಪ್ರದಾನ, ಬಳಿಕ ಶಿಷ್ಯ ಬಳಗದ ಸಂಕೀರ್ತನಾ ನಾಮೋತ್ಸವ, ನೃತ್ಯ ಭಜನೆ, ಸಮೂಹ ಭಜನೆ, ದಾಸ ಚಿಂತನೆಗಳ ಸತ್ಸಂಗ, ಅಪರಾಹ್ನ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಹಾಗು ಮುಂಬಯಿ ನಗರದ ಗಣ್ಯರು ಅತಿಥಿಗಳಾಗಿ ಭಾಗವಹಿಸುವರು.
ಇದೇ ಸಂದರ್ಭದಲ್ಲಿ ರಾಮಕೃಷ್ಣ ಕಾಟುಕುಕ್ಕೆ ಮತ್ತು ಭಜನಾ ಶಿಷ್ಯ ವೃಂದದವರಿಂದ ದೀಕ್ಷೆ ನೀಡಿ ಅನುಗ್ರಹಿಸಿದ ಗುರುಗಳಿಗೆ ಗುರುವಂದನೆ ಜರಗಲಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ, ಬೆಂಗಳೂರು ಹರಿದಾಸ ಸಂಘದ ಅಧ್ಯಕ್ಷ ಹ.ರಾ.ನಾಗರಾಜ್‍ಚಾರ್ಯ ಬೆಂಗಳೂರು ಅವರು ಹರಿದಾಸ ದೀಕ್ಷೆಯ ಕುರಿತಾಗಿ ವಿಶೇಷ ಉಪನ್ಯಾಸ ನೀಡುವರು.


