ಕಾಸರಗೋಡು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ನವೀಕರಣ ಸಮಿತಿಯ ನೇತೃತ್ವದಲ್ಲಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನವೀಕರಣ ಕಾಮಗಾರಿ ಭರದಿಂದ ಜರಗುತ್ತಿದ್ದು, ಈ ಬಗ್ಗೆ ಭಕ್ತ ಜನರ ಗಮನವನ್ನು ಜಾಗೃತಗೊಳಿಸಲು ಜ.21 ರಂದು ಮಂಗಳವಾರ ಅಪರಾಹ್ನ 3.30 ರಿಂದ ಅಣಂಗೂರು ಶ್ರೀ ಶಾರದಾಂಬ ಭಜನಾ ಮಂದಿರದಿಂದ ಆರಂಭಗೊಂಡು ನಗರ ಪ್ರದಕ್ಷಿಣೆಯ ಮೂಲಕ ಕರಂದಕ್ಕಾಡು ಶ್ರೀ ವೀರ ಹನುಮಾನ್ ಮಂದಿರದಲ್ಲಿ ಸಂಪನ್ನಗೊಳ್ಳುವ ಭವ್ಯ ಭಜನಾ ಸಂಕೀರ್ತನೆ ಜರಗಲಿದೆ.
ಶ್ರೀಧಾಮ ಮಾಣಿಲದ ಪರಮಪೂಜ್ಯ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಭವ್ಯ ಭಜನಾ ಸಂಕೀರ್ತನೆಯನ್ನು ಉದ್ಘಾಟಿಸುವರು.

