ಕಾಸರಗೋಡು: ಕೇಳುಗುಡ್ಡೆ ಅಯ್ಯಪ್ಪ ನಗರದ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ಮಹೋತ್ಸವ ಡಿ.28 ರಿಂದ 30 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಡಿ.27 ರಂದು ಬೆಳಗ್ಗೆ 8 ಕ್ಕೆ ಉಗ್ರಾಣ ತುಂಬಿಸುವ ಮತ್ತು ಶ್ರೀ ದೇವರಿಗೆ ಚಿನ್ನದ ಕಿರೀಟ ಸಮರ್ಪಣೆ ಶೋಭಾಯಾತ್ರೆಯು ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಕ್ಷೇತ್ರದಿಂದ ಹೊರಡುವುದು.
ಡಿ.28 ರಂದು ಬೆಳಗ್ಗೆ 8 ಕ್ಕೆ ಗಣಪತಿ ಹೋಮ, ಶುದ್ಧಿ ಕಲಶ, ಮಧ್ಯಾಹ್ನ 12.30 ಕ್ಕೆ ಪೂಜೆ, ಪ್ರಸಾದ ವಿತರಣೆ, 1ಕ್ಕೆ ಅನ್ನಸಂತರ್ಪಣೆ, ಸಂಜೆ 5 ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ನ್ಯಾಯವಾದಿ ಪಿ.ಮುರಳೀಧರನ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ, ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಆಶೀರ್ವಚನ ನೀಡುವರು. ಸಂಸದ ನಳಿನ್ ಕುಮಾರ್ ಕಟೀಲು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಂ.ಟಿ.ದಿನೇಶ್ ಬಹುಮಾನ ವಿತರಿಸುವರು. ಭಾಸ್ಕರ ದೇವಸ್ಯ, ರಾಜಶೇಖರ, ಸತ್ಯಭಾಮ ಉಪಸ್ಥಿತರಿರುವರು. ರಾತ್ರಿ 7.30 ರಿಂದ ದೀಪ ಪ್ರತಿಷ್ಠೆ, ಭಜನೆ, 8.30 ಕ್ಕೆ ಪೂಜೆ, ಪ್ರಸಾದ ವಿತರಣೆ, 9 ರಿಂದ ನೃತ್ಯ ವೈವಿಧ್ಯ ಜರಗಲಿದೆ.
ಡಿ.29 ರಂದು ಬೆಳಗ್ಗೆ 7 ಕ್ಕೆ ಗಣಪತಿ ಹೋಮ, 8 ಕ್ಕೆ ಶ್ರೀ ಶಾಸ್ತಾ ಅಷ್ಟೋತ್ತರ ಶತನಾಮಾವಳಿ, 9 ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, 9.30 ಕ್ಕೆ ನಾಗ ತಂಬಿಲ, ಆಶ್ಲೇಷ ಬಲಿ, ಮಧ್ಯಾಹ್ನ 12 ಕ್ಕೆ ಪೂಜೆ, ಪ್ರಸಾದ ವಿತರಣೆ, 1 ಕ್ಕೆ ಅನ್ನ ಸಂತರ್ಪಣೆ, 1.30 ರಿಂದ ಯಕ್ಷಗಾನ, ರಾತ್ರಿ 8 ಕ್ಕೆ ದೀಪ ಪ್ರತಿಷ್ಠೆ, ಭಜನೆ, 8.30 ಕ್ಕೆ ಸಹಸ್ರ ದೀಪೆÇೀತ್ಸವ, 9 ಕ್ಕೆ ಪೂಜೆ, ಪ್ರಸಾದ ವಿತರಣೆ, 9.15 ಕ್ಕೆ ನಾಟಕ, ಡಿ.30 ರಂದು ಬೆಳಗ್ಗೆ 7 ಕ್ಕೆ ಗಣಪತಿ ಹೋಮ, 9 ಕ್ಕೆ ಸಾಮೂಹಿಕ ಶ್ರೀ ಶನೀಶ್ವರ ಪೂಜೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1 ರಿಂದ ಅನ್ನ ಸಂತರ್ಪಣೆ, 1.30 ಕ್ಕೆ ಭಕ್ತಿಗಾನ ಸುಧಾ, ಸಂಜೆ 4 ಕ್ಕೆ ಹುಲ್ಪೆ ಮೆರವಣಿಗೆ, 6.11 ಕ್ಕೆ ದೀಪ ಪ್ರತಿಷ್ಠೆ, ಭಜನೆ, 7 ಕ್ಕೆ ಶೋಭಾಯಾತ್ರೆ ಆರಂಭ, ರಾತ್ರಿ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಡಿ.31 ರಂದು ಬೆಳಗ್ಗೆ ಸೂರ್ಯೋದಯಕ್ಕೆ ದೀಪ ವಿಸರ್ಜನೆ, ಮಂಗಳಂ ನಡೆಯಲಿದೆ.

