HEALTH TIPS

ಬೇಕಲ ಕೋಟೆಯಲ್ಲಿ ಕಣ್ಮನ ಸೆಳೆಯುತ್ತಿರುವ ಫಲ-ಪುಷ್ಪ ಮೇಳ


     ಕಾಸರಗೋಡು: `ಪ್ರವಾಸಿಗರೇ ಬನ್ನಿ...ಈ ಬಾರಿಯ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆಯನ್ನು ಬೇಕಲ ಕೋಟೆಯಲ್ಲಿ ಆಚರಿಸೋಣ...' ಎಂಬ ಘೊಷಣೆಯೊಂದಿಗೆ ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯಲ್ಲಿ ಅಗ್ರಿ ಹಾರ್ಟಿ ಸೊಸೈಟಿ ನೇತೃತ್ವದಲ್ಲಿ ಆಯೋಜಿಸಿದ ಕೃಷಿ-ಸಸ್ಯ-ಫಲ-ಪುಷ್ಪ ಮೇಳ ಕಣ್ಮನ ಸೆಳೆಯುತ್ತಿದೆ.
     2010 ಜನವರಿ 1 ರ ವರೆಗೆ ಬೇಕಲ ಕೋಟೆಯಲ್ಲಿ ನಡೆಯುವ ಮೇಳವನ್ನು ಪ್ರವಾಸಿಗರನ್ನು ಪ್ರಧಾನ ಗುರಿಯಾಗಿರಿಸಿ ಆಯೋಜಿಸಲಾಗಿದೆ. ರಂಗು ರಂಗಿನ ಹೂಗಳು, ವಿವಿಧ ಜಾತಿಯ ಗಿಡ-ಬಳ್ಳಿಗಳು ಆಕರ್ಷಣೆಯ ಕೇಂದ್ರವಾಗಿದೆ. ಆರ್ಕಿಡ್, ಆಂತೂರಿಯಂ, ತರಕಾರಿ, ಹೂದಾನಿಗಳಲ್ಲಿ ಬೆಳಸುವ ಗುಲಾಬಿ ಸಹಿತ ಹೂವುಗಳಲ್ಲದೆ ಕ್ಯಾಕ್ಟಸ್, ಬೋನ್ಸಾಯ್ ಇತ್ಯಾದಿಗಳೂ, ತೆಂಗಿನಗೊನೆ, ಅಡಕೆ ಗೊನೆ, ಗಡ್ಡೆಗಳು, ವಿವಿಧ ಹಣ್ಣುಗಳ ಗಿಡಗಳು, ತರಕಾರಿ, ಮೆಣಸು, ಔಷಧ ಸಸ್ಯಗಳು ಇತ್ಯಾದಿಗಳನ್ನು ಪ್ರದರ್ಶನಕ್ಕೆ ಇರಿಸಿದ್ದು ಗಮನ ಸೆಳೆಯುತ್ತಿದೆ.
    ಮುಂದಿನ ವರ್ಷ ಹೆಚ್ಚಿನ ಪೆÇ್ರೀತ್ಸಾಹ : ಮುಂದಿನ ವರ್ಷಗಳಿಂದ ಕೃಷಿಕರು ಉತ್ಪಾದಿಸುವ ಉತ್ಪನ್ನಗಳನ್ನು ಶೇಖರಿಸಿ ಬೇಕಲ ಕೃಷಿ, ಫಲ, ಪುಷ್ಟ ಮೇಳವನ್ನು ಜನರನ್ನು ಇನ್ನಷ್ಟು ಆಕರ್ಷಿಸುವ ರೀತಿಯಲ್ಲಿ ವ್ಯವಸ್ಥೆಗೊಳಿಸಲು ನೂತನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು.
      ಅವರು ಮೇಳವನ್ನು ಉದ್ಘಾಟಿಸಿ ಮಾತನಾಡಿ ಜಿಲ್ಲೆಯ ಕೃಷಿಕರು ಉತ್ಪಾದಿಸುವ ಉತ್ಪನ್ನಗಳನ್ನು ಬೇಕಲ ಫೆಸ್ಟ್‍ನಲ್ಲಿ ಪ್ರದರ್ಶಿಸಲು ವಿದೇಶಿಯರನ್ನೂ, ಸ್ವದೇಶಿಯರನ್ನೂ ಕೃಷಿಯತ್ತ ಆಕರ್ಷಿಸುವುದಕ್ಕಾಗಿ ನೂತನ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಕೃಷಿಕರಿಗೂ ಹೆಚ್ಚಿನ ಸಹಾಯಕವಾಗುವುದು. ಮುಂದಿನ ವರ್ಷಗಳಲ್ಲಿ ವಿಪುಲವಾದ ರೀತಿಯಲ್ಲಿ ಕೃಷಿ ಫಲಪುಷ್ಪ ಮೇಳವನ್ನು ಆಕರ್ಷಿಸುವ ರೀತಿಯಲ್ಲಿ ನಡೆಸಲಾಗುವುದು ಎಂದು ಸಚಿವರು ಹೇಳಿದರು.
     ಕಾರ್ಯಕ್ರಮದಲ್ಲಿ ಉದುಮ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಇಂದಿರಾ ಅಧ್ಯಕ್ಷತೆ ವಹಿಸಿದರು. ಪಳ್ಳಿಕೆರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಟಿ.ಎಂ.ಅಬ್ದುಲ್ ಲತೀಫ್, ಕಾಂಞಂಗಾಡು ಬ್ಲಾಕ್ ಪಂಚಾಯತ್ ಸದಸ್ಯೆ ಅಸುರಾಬಿ, ಪಳ್ಳಿಕರೆ ಗ್ರಾಮ ಪಂಚಾಯತ್ ಸದಸ್ಯೆ ಎಂ.ಜಿ.ಆಯಿಷ, ಕಾಸರಗೋಡು ಪ್ರಿನ್ಸಿಪಲ್ ಕೃಷಿ ಅ„ಕಾರಿ ಮಧು ಜಾರ್ಜ್ ಮತ್ತಾಯಿ, ಕಾಸರಗೋಡು ಕೃಷಿ ಡೆಪ್ಯೂಟಿ ಡೈರೆಕ್ಟರ್ ಆರ್.ವೀಣಾ ರಾಣಿ, ಪೆÇ್ರೀಗ್ರಾಂ ಸಮಿತಿ ಸಂಚಾಲಕ ಎಂ.ಎ.ಲತೀಫ್ ಹಾಗು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿ„ಗಳು ಉಪಸ್ಥಿತರಿದ್ದರು. ಕಾಸರಗೋಡು ಜಿಲ್ಲಾ„ಕಾರಿ ಡಾ|ಸಜಿತ್ ಬಾಬು ಸ್ವಾಗತಿಸಿದರು. ಪೆÇಗ್ರಾಂ ಸಮಿತಿ ಅಧ್ಯಕ್ಷ ಕೆ.ರವೀಂದ್ರನ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries