ಕಾಸರಗೋಡು: ಕಾಲಕ್ಕನುಗುಣವಾದ ಶಾಂತಿಯ ಸಂದೇಶವನ್ನು ನೀಡಲು ಬೀಚ್ ಗೇಮ್ಸ್‍ನಿಂದ ಸಾಧ್ಯವಾಗಬಹುದು ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು.
ಕಾಸರಗೋಡು ಜಿಲ್ಲಾ ಬೀಚ್ ಗೇಮ್ಸ್‍ನ್ನು ಪಳ್ಳಿಕೆರೆ ಬೀಚ್‍ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮುದ್ರ ತೀರದಲ್ಲಿ ವಾಸಿಸುವವರು ಅನುಭವಿಸುವ ಯಾತನೆಯನ್ನು ನಾವು ಅರಿಯಬೇಕಾಗಿದೆ. ಅವರ ಪಕ್ಕದಲ್ಲಿಯೇ ನಡೆಯುವ ಇಂತಹ ಬೀಚ್ ಗೇಮ್ಸ್‍ನಿಂದ ಅವರಲ್ಲಿ ಮಾನವೀಯತೆಯ ಸಂದೇಶ ಹೆಚ್ಚಾಗಬಹುದಾಗಿದೆ. ಅದಕ್ಕಾಗಿ ಎಲ್ಲಾ ವರ್ಷವೂ ಬೀಚ್ ಗೇಮ್ಸ್ ಆಯೋಜಿಸಲಾಗುವುದು. ಮುಂದಿನ ದಿನಗಳಲ್ಲಿ ಬೀಚ್ ಗೇಮ್ಸ್ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು ಉತ್ತಮ ಪ್ರವಾಸಿ ಕೇಂದ್ರವನ್ನಾಗಿ ಬೇಕಲ ಮತ್ತು ಪಳ್ಳಿಕರೆ ಪ್ರದೇಶಗಳನ್ನು ಮಾರ್ಪಾಡುಗೊಳಿಸಲು ಬೀಚ್ ಗೇಮ್ಸ್ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.
ಕ್ರೀಡಾ ಮೇಳದ ಅಭಿವೃದ್ಧಿಯನ್ನು ಕಂಡುಕೊಂಡು ನಡೆಸುವ ಈ ಮೇಳದಲ್ಲಿ ಎಲ್ಲಾ ಊರವರು ಭಾಗವಹಿಸಬೇಕೆಂದೂ, ನಾಡಿನ ಪ್ರವಾಸೋದ್ಯಮ ಕೇಂದ್ರಗಳ ಕುರಿತು ಮೊತ್ತ ಮೊದಲಾಗಿ ಊರವರು ಉತ್ತಪ ರೀತಿಯಲ್ಲಿ ಮನದಟ್ಟು ಮಾಡಬೇಕಾಗಿದೆ ಎಂದರು.
ಫುಟ್ಬಾಲ್, ವಾಲಿಬಾಲ್, ಕಬಡ್ಡಿ, ಹಗ್ಗ ಜಗ್ಗಾಟ ಮೊದಲಾದ ಜನಪ್ರಿಯ ಆಟಗಳಿಂದಾಗಿ ಬೀಚ್‍ನ ಛಾಯೆಯನ್ನೇ ಬದಲಾಯಿಸಲು ಸಾಧ್ಯವಾಗಬಹುದು ಎಂದರು.


