ಕಲಬುರಗಿ: ಗ್ರಹಣದಿಂದ ಕೇಡಾಗುತ್ತದೆಂದು ನಂಬಿ ಸಣ್ಣ ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಈ ಕಂಕಣ ಗ್ರಹಣದಿಂದ ಮಕ್ಕಳಿಗೆ ಕೇಡಾಗುತ್ತದೆ ಎಂಬ ವದಂತಿ ಹರಿದಾಡಿದ ಪರಿಣಾಮ ಸಣ್ಣ ಮಕ್ಕಳನ್ನು ತಾಯಂದಿರೇ ತಿಪ್ಪೆಯಲ್ಲಿ ಹೂತಿಟ್ಟರು.
ಗ್ರಹಣದ ದಿನ ಅಂಗವೈಕಲ್ಯ ಇರುವ ಮಕ್ಕಳನ್ನು ಮಣ್ಣಿನಲ್ಲಿ ಹೂತರೆ ಅಂಗವೈಕಲ್ಯ ದೂರಾಗುತ್ತದೆ ಎಂಬ ನಂಬಿಕೆಯೂ ಕೆಲವು ಕಡೆ ಇದ್ದು, ಅದರ ಪ್ರಯೋಗವೂ ಕೆಲವು ಕಡೆ ಆಗಿದೆ. ಅಂಗವೈಕಲ್ಯ ಇದ್ದ ಮಕ್ಕಳನ್ನು ಮಣ್ಣಿನಲ್ಲಿ ಕತ್ತಿನವರೆಗೆ ಹೂತಿಟ್ಟ ಘಟನೆಗಳೂ ಸಹ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವರದಿ ಆಗಿದೆ. ಒಬ್ಬನೇ ಮಗನಿದ್ದರೆ ಅವನಿಗೆ ಗ್ರಹಣ ಕೇಡಾಗುತ್ತದೆಂದು ಸಗಣಿ ಕಲಸಿದ ನೀರಿನಲ್ಲಿ ಸ್ನಾನ ಮಾಡಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ. ಈ ಮೇಲಿನವೆಲ್ಲಾ ಮೂಢನಂಬಿಕೆಗಳಾಗಿದ್ದು, ಗ್ರಹಣವು ಪ್ರಾಕೃತಿಕ ಸಹಜ ಕ್ರಿಯೆ ಅದರ ಪ್ರಭಾವ ಮನುಷ್ಯರ, ಪ್ರಾಣಿಗಳ ಮೇಲೆ ಆಗದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಘಟನೆಯ ಬಗ್ಗೆ ಮಾನವ ಹಕ್ಕು-ಮಕ್ಕಳ ಹಕ್ಕುಗಳ ಆಯೋಗ ಇನ್ನೇನು ಹೇಳಲಿದೆಯೋ ಕಾದು ನೋಡಲಾಗುತ್ತಿದೆ.


