ಕಾಸರಗೋಡು: ನ್ಯಾಶನಲ್ ವಿಶ್ವಕರ್ಮ ಫೆಡರೇಶನ್ ಕಾಸರಗೋಡು ಜಿಲ್ಲಾ ಸಮಿತಿಯ ವತಿಯಿಂದ ಡಿ.22 ರಂದು ನಗರದ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ವಿಶ್ವಕರ್ಮ ಕುಟುಂಬ ಸಂಗಮ ನಡೆಯಲಿದೆ.
ಇದೇ ವೇಳೆ ಎಸ್‍ಎಸ್‍ಎಲ್‍ಸಿ, ಪ್ಲಸ್ ಟು ಪರೀಕ್ಷೆಗಳಲ್ಲಿ ಉನ್ನತ ವಿಜಯಗಳಿಸಿದವರಿಗೆ ಅಭಿನಂದನೆ, ನಗದು ಬಹುಮಾನ ನೀಡಲಾಗುವುದು. ಜೊತೆಗೆ ಭಕ್ತಿಗಾನ ಆಲಾಪನೆ, ಚಿತ್ರ ರಚನೆ, ಪ್ರಬಂಧ ರಚನೆ, ಹೂ ರಂಗೋಲಿ ಮೊದಲಾದ ಸ್ಪರ್ಧೆಗಳು ನಡೆಸಲಾಗುವುದು. ಈ ಬಗ್ಗೆ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಚಂದ್ರನ್ ಆರ್ಟಿಸ್ಟ್ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಕಾರ್ಯಾಧ್ಯಕ್ಷ ಸೀತಾರಾಮ ಆಚಾರ್ಯ ಸಭೆಯನ್ನು ಉದ್ಘಾಟಿಸಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಘವನ್ ದೊಡ್ಡವಯಲ್, ವಿಷ್ಣು ಆಚಾರ್ಯ, ರಾಜನ್ ಮನ್ನಿಪ್ಪಾಡಿ, ಸಂತೋಷ್, ಅರವಿಂದಾಕ್ಷನ್, ವನಿತಾ ತುಕಾರಾಂ, ನಿಷಾ ವೆಳ್ಳರಿಕುಂಡು, ಓಮನ ಅಂಬಿ, ರಾಧಾಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.

