ಕಾಸರಗೋಡು: ಕಾಸರಗೋಡು ದೂರು ರಹಿತ ಜಿಲ್ಲೆಯಾಗಿ ಶೀಘ್ರವೇ ಪರಿವರ್ತನೆಗೊಳ್ಳಲಿದೆ ಎಂದು ಮಹಿಳಾ ಆಯೋಗ ಸದಸ್ಯೆ ಶಾಹಿದಾ ಕಮಾಲ್ ಅವರು ಹೇಳಿದರು.
ಕಾಸರಗೋಡಿನ ಜಿಲ್ಲಾಧಿಕಾರಿಗಳ ಕಾನರೆನ್ಸ್ ಹಾಲ್‍ನಲ್ಲಿ ನಡೆದ ಮಹಿಳಾ ಆಯೋೀಗ ಅದಾಲತ್ ಬಳಿಕ ಅವರು ಮಾತನಾಡಿದರು.
ಮಹಿಳಾ ಆಯೋಗದ ಮುಂದೆ ಬರುತ್ತಿರುವ ದೂರುಗಳಿಗೆ ತೀರ್ಪು ಕಲ್ಪಿಸುವುದೂ, ದೂರುಗಳನ್ನು ಪರಿಹರಿಸಲು ಸಿಬ್ಬಂದಿಗಳು ಸಹಕರಿಸುತ್ತಿರುವುದರಿಂದ ದೂರುಗಳು ಕಡಿಮೆಯಾಗಲು ನೆರವಾಗುತ್ತಿದೆ ಎಂದರು.
ಅದಾಲತ್‍ನಲ್ಲಿ 32 ದೂರುಗಳು ಬಂದಿದ್ದು, ಈ ಪೈಕಿ 9 ದೂರುಗಳಿಗೆ ತೀರ್ಪು ಕಲ್ಪಿಸಲಾಯಿತು. ಮೂರು ದೂರುಗಳಿಗೆ ಸಂಬಂ„ಸಿ ವಿವಿಧ ಇಲಾಖೆಗಳ ವರದಿಯನ್ನು ಕೇಳಲಾಗಿದೆ. ಇದು ಸಹಿತ 23 ದೂರುಗಳನ್ನು ಮುಂದಿನ ಮೊಕ್ಕಾಂನಲ್ಲಿ ಆಲಿಸಲಾಗುವುದು ಎಂದರು.
ಇತ್ತೀಚೆಗಿನ ದಿನಗಳಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಮನೆಗಳಲ್ಲಿ ಹಿಂಸೆ ಕಡಿಮೆಯಾಗಿದ್ದರೂ, ಕಾಸರಗೋಡು ಜಿಲ್ಲೆಯಲ್ಲಿ ಬಹುತೇಕ ಹೆಚ್ಚಳದಲ್ಲಿದೆ ಎಂದರು. ಈ ಬಾರಿಯ ದೂರುಗಳಲ್ಲಿ ಅರ್ಧಕ್ಕೂ ಹೆಚ್ಚು ಮನೆಗಳಲ್ಲಿ ಹಿಂಸೆಗೆ ಸಂಬಂಧಪಟ್ಟ ದೂರುಗಳೇ ಅಧಿಕವಾಗಿದೆ ಎಂದರು.
ಅದಾಲತ್‍ಗೆ ಕಾಸರಗೋಡು ಆರ್‍ಡಿಒ ಕೆ.ರವಿ ಕುಮಾರ್, ಹುಜೂರು ಶಿರಸ್ತೇದಾರ್ ಕೆ.ನಾರಾಯಣನ್, ನ್ಯಾಯವಾದಿ ಪಿ.ಸಿಂಧು, ಮಹಿಳಾ ಸೆಲ್ ಇನ್‍ಸ್ಪೆಕ್ಟರ್ ಸಿ.ಭಾನುಮತಿ, ಸಿವಿಲ್ ಪೆÇಲೀಸ್ ಆಫೀಸರ್ ಸಿ.ಪಿ.ಕೆ.ಪ್ರಸಾದ್ ಮೊದಲಾದವರು ನೇತೃತ್ವ ನೀಡಿದರು.

