ಕಾಸರಗೋಡು: ಉಪಚುನಾವಣೆ ನಡೆದ ಕಾಸರಗೋಡು ನಗರಸಭೆಯ ಎರಡು ವಾರ್ಡ್‍ಗಳ ಪೈಕಿ ಒಂದರಲ್ಲಿ ಎಡರಂಗ ಸ್ವತಂತ್ರ ಮತ್ತು ಇನ್ನೊಂದರಲ್ಲಿ ಯುಡಿಎಫ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಹೊನ್ನೆಮೂಲೆ 21 ನೇ ವಾರ್ಡ್‍ನಲ್ಲಿ ಎಡರಂಗ ಸ್ವತಂತ್ರ ಅಭ್ಯರ್ಥಿ ಮೊೈದೀನ್ ಕಂಪ್ಯೂಟರ್, ತೆರುವತ್ 22 ನೇ ವಾರ್ಡ್‍ನಲ್ಲಿ ಯುಡಿಎಫ್‍ನ ರೀತಾ ಗೆಲುವು ಸಾಧಿಸಿದ್ದಾರೆ.
ಹೊನ್ನೆಮೂಲೆ ವಾರ್ಡ್‍ನಲ್ಲಿ ಮೊೈದೀನ್ ಕಂಪ್ಯೂಟರ್ ಅವರಿಗೆ 492 ಮತಗಳು ಲಭಿಸಿವೆ. ಇಲ್ಲಿ ಯುಡಿಎಫ್ ಅಭ್ಯರ್ಥಿ ಅಬ್ದುಲ್ ಮುನೀರ್ ಅವರಿಗೆ 351 ಮತ ಮತ್ತು ಸ್ವತಂತ್ರ ಅಭ್ಯರ್ಥಿಗಳಾದ ಭಾಸ್ಕರ ಅವರಿಗೆ 2, ಮೊೈದು ಕಂಪೌಂಡರ್ ಅವರಿಗೆ 1, ಲಲಿತ ಅವರಿಗೆ 2 ಮತಗಳು ಲಭಿಸಿವೆ.
ತೆರುವತ್ ವಾರ್ಡ್‍ನಲ್ಲಿ ರೀತಾ ಅವರಿಗೆ 321 ಮತ ಲಭಿಸಿದೆ. ಎಲ್‍ಡಿಎಫ್‍ನ ಎಂ.ಬಿಂದು ಅವರಿಗೆ 146 ಮತಗಳು, ಎನ್‍ಡಿಎಯ ಎನ್.ಮಣಿ ಅವರಿಗೆ 3 ಮತಗಳು ಲಭಿಸಿದೆ. ಹೊನ್ನೆಮೂಲೆ ವಾರ್ಡ್‍ನಲ್ಲಿ ಈ ಹಿಂದೆ ನಡೆದ ಚುನಾವಣೆಯಲ್ಲಿ ಯುಡಿಎಫ್ ಗೆಲುವು ಸಾ„ಸಿತ್ತು. ಉಪಚುನಾವಣೆಯಲ್ಲಿ ಈ ವಾರ್ಡ್‍ನಲ್ಲಿ ಎಲ್‍ಡಿಎಫ್ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಬಳಾಲ್ : ಸೀಟು ಕಾಯ್ದುಕೊಂಡ ಯುಡಿಎಫ್ : ಬಳಾಲ್ ಗ್ರಾಮ ಪಂಚಾಯತ್‍ನ ಮಾಲೋಂ 11 ನೇ ವಾರ್ಡ್‍ನಲ್ಲಿ ಯುಡಿಎಫ್ ಅಭ್ಯರ್ಥಿ ಜೋಯಿ ಮೈಕಲ್ ಗೆಲುವು ಸಾಧಿಸಿದ್ದಾರೆ. ಜೋಯಿ ಮೈಕಲ್ 736 ಮತಗಳನ್ನು ಪಡೆದರೆ, ಎಲ್‍ಡಿಎಫ್‍ನ ಜಾರ್ಜ್ ಕುಟ್ಟಿ ತೋಮಸ್‍ಗೆ ಕೇವಲ 138 ಮತಗಳು ಲಭಿಸಿತು. ಜೋಯಿ ಮೈಕಲ್ 598 ಮತಗಳ ಅಂತರದಿಂದ ಗೆಲುವು ಸಾಧಿಸಿ ಯುಡಿಎಫ್ ಸೀಟನ್ನು ಉಳಿಸಿಕೊಂಡಿದೆ.

