ಕಾಸರಗೋಡು: ತಲ್ಲಾಣಿ ಶ್ರೀ ಗಣೇಶ ಶಾರದಾ ಮಂದಿರದಲ್ಲಿ ರಾಮರಾಜ ಕ್ಷತ್ರಿಯ ಭಜನಾ ಸಂಘದ ನೇತೃತ್ವದಲ್ಲಿ 90 ನೇ ವರ್ಷದ ಏಕಾಹ ಭಜನಾ ಸಮಾರಂಭ ಡಿ.27 ರಿಂದ 29 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಡಿ.27 ರಂದು ಪ್ರಾತ:ಕಾಲ ಗಣಪತಿ ಹೋಮ, ದೀಪ ಪ್ರತಿಷ್ಠೆ, ಏಕಾಹ ಭಜನಾ ಪ್ರಾರಂಭ, ಮಧ್ಯಾಹ್ನ 12.45 ಕ್ಕೆ ಪೂಜೆ, ಸಂಜೆ 6.15 ಕ್ಕೆ ಶ್ರೀ ರಕ್ತೇಶ್ವರಿ ತಂಬಿಲ, 7 ಕ್ಕೆ ಪೂಜೆ, ರಾತ್ರಿ 10 ಕ್ಕೆ ಉಲ್ಪೆ ಸಮರ್ಪಣೆ, ಡಿ.28 ರಂದು ಮುಂಜಾನೆ ಮಹಾಪೂಜೆ, ಮಂಗಳಾಚರಣೆ, ಪ್ರಾರ್ಥನೆ, ಪ್ರಸಾದ ವಿತರಣೆ, ಫಲವಸ್ತುಗಳ ಹರಾಜು ನಡೆಯುವುದು. ಸಂಜೆ 6 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ, ರಾತ್ರಿ 7.30 ರಿಂದ ವಾರದ ಭಜನೆ, 8.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಡಿ.29 ರಂದು ಶ್ರೀ ವಿದ್ಯಾಸರಸ್ವತಿ ಸೂಕ್ತ ಹೋಮ, ಬೆಳಗ್ಗೆ 6 ಕ್ಕೆ ಪುಣ್ಯಾಹ ವಾಚನ, ಆಚಾರ್ಯ ವರಣ, ಸಾಮೂಹಿಕ ಪ್ರಾರ್ಥನೆ, ಕಲಶ ಪ್ರತಿಷ್ಠೆ, ಪೂರ್ವಾಹ್ನ 11.30 ಕ್ಕೆ ಹೋಮದ ಪೂರ್ಣಾಹುತಿ, ಮಧ್ಯಾಹ್ನ 12 ಕ್ಕೆ ಆಶೀರ್ವಚನ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ರಾತ್ರಿ 9 ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಜರಗಲಿದೆ.

