ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವರ ಧನುಸಂಕ್ರಮಣ ಮಹೋತ್ಸವದ ಸಂದರ್ಭದಲ್ಲಿ ಶುಕ್ರವಾರ ಶ್ರೀ ಶಿವಶಕ್ತಿ ಪೆರಡಾಲ ಇದರ 27ನೇ ವಾರ್ಷಿಕೋತ್ಸವದ ಪ್ರಯುಕ್ತ ಪಟ್ಟಾಜೆ ಸಹೋದರರಾದ ಸಾತ್ವಿಕ್ ರಾಜ್, ಸಾಕೇತ್ ರಾಜ್ ಮತ್ತು ಸಹೋದರಿಯರಾದ ನಿಶಿತಾ ಹಾಗೂ ದೀಕ್ಷಿತಾ ಪುತ್ತೂರು ಬಳಗದವರಿಂದ ನಡೆದ ನೃತ್ಯ-ತ್ರಿನೇತ್ರ ಭರತನಾಟ್ಯ, ಕೂಚುಪುಡಿ ನೃತ್ಯ ಜನಮನಸೂರೆಗೊಂಡಿತು. ಸತತ ಮೂರು ಗಂಟೆಗಳ ಕಾಲ ಪ್ರೇಕ್ಷಕರನ್ನು ನಾಟ್ಯಲೋಕಕ್ಕೆ ಕೊಂಡೊಯ್ಯುವಲ್ಲಿ ಕಲಾವಿದರು ಸಫಲರಾದರು. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಕರ್ನಾಟಕ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ರ್ಯಾಂಕ್ ವಿಜೇತ ಶ್ರೀಕೃಷ್ಣ ಶರ್ಮ ಕಡಪ್ಪು, ಅಬಕಾಸ್ ಚಾಂಪ್ಯನ್ ಆದಿತ್ಯ ಪೆರಡಾಲ ಹಾಗೂ ಭರತನಾಟ್ಯದಲ್ಲಿ ಅಮೋಘ ಸಾಧನೆಗೈದ ಪಟ್ಟಾಜೆ ಸಹೋದರರನ್ನು ಅಭಿನಂದಿಸಲಾಯಿತು. ಪೆರಡಾಲ ಶ್ರೀ ಉದನೇಶ್ವರ ಸೇವಾಸಮಿತಿಯ ಅಧ್ಯಕ್ಷ, ಧಾರ್ಮಿಕ ಸಾಮಾಜಿಕ ಮುಂದಾಳು ಜಯದೇವ ಖಂಡಿಗೆ ಸನ್ಮಾನಿಸಿದರು. ಉದಯಶಂಕರ ಪೆರಡಾಲ ನಿರೂಪಿಸಿದರು.
ಪೆರಡಾಲ ಶ್ರೀ ಶಿವಶಕ್ತಿಯ 27ನೇ ವಾರ್ಷಿಕೋತ್ಸವ
0
ಡಿಸೆಂಬರ್ 21, 2019