ಬದಿಯಡ್ಕ: ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ರಜತ ಸಂಭ್ರಮ, 25ನೇ ವಾರ್ಷಿಕೋತ್ಸವ ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವವು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಗಳಿಂದ ಭಕ್ತಾದಿಗಳು ಭಕ್ತಿಭಾವದೊಂದಿಗೆ ಆಗಮಿಸಿದ್ದರು. ಶನಿವಾರ ಬೆಳಗ್ಗೆ ಗಣಪತಿ ಹೋಮ, ಶ್ರೀ ಅಯ್ಯಪ್ಪ ಸೇವಾಸಂಘ ಚುಕ್ಕಿನಡ್ಕ, ಮಹಾವಿಷ್ಣು ಭಜನಾ ಸಂಘ ಕಾರ್ಮಾರು, ಕುಮಾರಸ್ವಾಮಿ ಭಜನಾಸಂಘ ನೀರ್ಚಾಲು, ವೃಂದಾವನ ಬಾಲಗೋಕುಲ ಮಾನ್ಯ, ಲಕ್ಷ್ಮೀಗಣೇಶ ಕುಣಿತ ಭಜನ ಸಂಘ ಬದಿಯಡ್ಕ ಇವರಿಂದ ಭಜನ ಸೇವೆ ನಡೆಯಿತು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತವನ್ನು ನೀಡಲಾಯಿತು. ಮಧ್ಯಾಹ್ನ ನೂರಾರು ಅಯ್ಯಪ್ಪ ವ್ರತಧಾರಿಗಳಿಂದ ಶರಣಂ ವಿಳಿ, ಮಹಾಪೂಜೆ ಜರಗಿತು.
ಅಯ್ಯಪ್ಪ ದೀಪೋತ್ಸವ :
ರಾತ್ರಿ ನಡೆಯಲಿರುವ ಶ್ರೀ ಅಯ್ಯಪ್ಪ ದೀಪೋತ್ಸವಕ್ಕೆ ಶ್ರೀ ಅಯ್ಯಪ್ಪನ ಗುಡಿ, ವಾವರ ಗುಡಿ, ಮಾಳಿಗಪುರತ್ತಮ್ಮ, ಗಣಪತಿ, ಸುಬ್ರಹ್ಮಣ್ಯ ಗುಡಿಯನ್ನು ಆಕರ್ಷಕವಾಗಿ ಬಾಳೆಯಗಿಡದ ದಂಡಿನಿಂದ ನಿರ್ಮಿಸಲಾಗಿತ್ತು. ಕೋಝಿಕ್ಕೋಡ್ ಬಾಲುಶ್ಶೇರಿಯ ಶ್ರೀ ಮಣಿಕಂಠ ಅಯ್ಯಪ್ಪನ್ ವಿಳಕ್ಕ್ ಸಂಘದ ವೇಣುಗೋಪಾಲನ್ ಮತ್ತು ತಂಡವು ವಿಧಿವಿಧಾನಗಳನ್ನು ಕೈಗೊಂಡು ಮಧ್ಯಾಹ್ನ ದೇವಸಂಕಲ್ಪದೊಂದಿಗೆ ಮಹಾಪೂಜೆಯನ್ನು ನೆರವೇರಿಸಿದರು. ನಾನಾ ಕಡೆಗಳಿಂದ ಆಗಮಿಸಿದ ಅಯ್ಯಪ್ಪ ವ್ರತಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ರಂಗಸಿರಿ ಸಾಂಸ್ಕøತಿ ವೇದಿಕೆ ಬದಿಯಡ್ಕ ಇದರ ವಿದ್ಯಾರ್ಥಿಗಳಿಂದ ಸಂಸ್ಕøತಿ ಸಿರಿ ವೈಭವದಲ್ಲಿ ಯಕ್ಷಗಾನ ಹಾಗೂ ಭಕ್ತಿಭಾವ ಸಂಗಮ ಪ್ರದರ್ಶಿಸಲ್ಪಟ್ಟಿತು. ಶುಕ್ರವಾರ ರಾತ್ರಿ ಸುರೇಶ್ ಯಾದವ್ ಜಯನಗರ ಇವರಿಂದ ಮಿಮಿಕ್ರಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ ಬನತ್ತ ಬಂಗಾರ್ ಯಕ್ಷಗಾನ ಬಯಲಾಟ ನಡೆಯಿತು.


