ಬದಿಯಡ್ಕ : ಗ್ರಾಮಪಂಚಾಯಿತಿಯ ಲೋಕೋಪಯೋಗಿ ವಿಭಾಗದಲ್ಲಿ ಸಹಾಯಕ ಇಂಜಿನಿಯರ್, ಓವರ್‍ಸಿಯರ್ ಹಾಗೂ ನೌಕರರು ಇಲ್ಲದಿರುದನ್ನು ಪ್ರತಿಭಟಿಸಿ ಗ್ರಾಮಪಂಚಾಯಿತಿ ಸದಸ್ಯರು ಚಳವಳಿಗೆ ಮುಂದಾಗಿದ್ದಾರೆ. ಡಿ.27ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ. ಖಾಲಿಯಾಗಿರುವ ಈ ಹುದ್ದೆಗಳಿಗೆ ನೇಮಕಾತಿ ನಡೆಸಬೇಕೆಂದು ಒತ್ತಾಯಿಸಿ ಗ್ರಾಮ ಪಂಚಾಯತ್‍ನ 19 ಸದಸ್ಯರೂ ಧರಣಿ ನಡೆಸುವರೆಂದು ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ತಿಳಿಸಿದ್ದಾರೆ. ಓರ್ವ ಸಹಾಯಕ ಇಂಜಿನಿಯರ್, ಇಬ್ಬರು ಓವರ್‍ಸಿಯರ್‍ಗಳು ಪಂಚಾಯತ್‍ನಲ್ಲಿದ್ದರು. ಆದರೆ ಇದೀಗ ಯಾರೂ ಇಲ್ಲದೆ ಈ ಹುದ್ದೆಗಳು ಖಾಲಿಯಾಗಿದೆ. ಇದರ ಫಲವಾಗಿ ಪಂಚಾಯಿತಿಯ ಅಭಿವೃದ್ಧಿಯು ಮೊಟಕುಗೊಂಡಿದೆಯೆಂದೂ ಅವರು ತಿಳಿಸಿದ್ದಾರೆ. ಇದೇ ವೇಳೆ ಬದಿಯಡ್ಕದಲ್ಲಿ ಕೆಲಸ ನಿರ್ವಹಿಸಿದರೆ ಉದ್ಯೋಗ ಕಳೆದುಕೊಳ್ಳಬೇಕಾದಿತೆಂಬ ಆತಂಕದಿಂದ ನೌಕರರು ವರ್ಗಾವಣೆಗೊಳ್ಳುತ್ತಿದ್ದಾರೆ ಎಂದು ಉಳಿದಿರುವ ನೌಕರರು ತಿಳಿಸುತ್ತಿದ್ದಾರೆ. ಹಲವು ಲೋಕೋಪಯೋಗಿ ಕಾಮಗಾರಿಗಳು ವಿವಾದಕ್ಕೆಡೆಯಾಗಿವೆ. ಮಾರ್ಚ್‍ನ ಮುಂಚಿತ ಮುಗಿಸಲು ಪ್ರಯತ್ನಿಸುವ ಹಲವು ಯೋಜನೆಗಳಿದೆಯೆಂದೂ, ಆ ಬಗ್ಗೆ ಹಾಗೂ ಬಳಿಕ ಉಂಟಾಗಬಹುದಾದ ತನಿಖೆ ನೌಕರರ ಕೆಲಸವನ್ನೇ ಇಲ್ಲದಾಗಿಸಲಿದೆಯೆಂದೂ ಅವರು ತಿಳಿಸಿದ್ದಾರೆ.
ಬದಿಯಡ್ಕ ಗ್ರಾಪಂ ಸದಸ್ಯರಿಂದ ಡಿ.27ರಂದು ಜಿಪಂ ಕಚೇರಿ ಮುಂದೆ ಧರಣಿ
0
ಡಿಸೆಂಬರ್ 25, 2019