ಕಾಸರಗೋಡು: ಮಾರಕ ರೋಗಗಳಿಂದ ಬಳಲುತ್ತಿರುವ , ಕೌಟುಂಬಿಕ ಆದಾಯ ಎರಡೂವರೆ ಲಕ್ಷ ರೂ.ಗಿಂತಕಡಿಮೆಯಿರುವ ಪರಿಶಿಷ್ಟ ಪಂಗಡದ ಮಂದಿಗೆ ಕೇಂದ್ರ ಸರ್ಕಾರ ನೀಡುವ ಡಾ.ಅಂಬೇಡ್ಕ ಫೌಂಡೇಷನ್ ಮೆಡಿಕಲ್ ಏಡೆಡ್ ಸ್ಕೀಂ ಮೂಲಕ ಚಿಕಿತ್ಸಾ ಆರ್ಥಿಕ ಸಹಾಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಬುದ, ಹೃದ್ರೋಗ, ಮೂತ್ರಜನಕಾಂಗ ಕಾಯಿಲೆ, ಕರುಳು ರೋಗ,ಅವಯವ ಬದಲಿಸಬೇಕಾದವರು, ಸ್ಪೈನಲ್ ಸರ್ಜರಿ ಅಗತ್ಯವಿರುವವರು ಹೀಗೆ ವಿವಿಧ ರೋಗಗಳಿಂದ ಬಳಲುತ್ತಿರುವರರು ಅರ್ಜಿಸಲ್ಲಿಸಬಹುದು. ಅರ್ಜಿಯ ಮಾದರಿ ಮತ್ತು ಮಾಹಿತಿಗಾಗಿ ಬ್ಲೋಕ್, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯನ್ನುಸಂಪರ್ಕಿಸಬಹುದು. ಸಂಸದ, ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್, ಆರೋಗ್ಯ ಇಲಾಖೆ ಕಾರ್ಯದರ್ಶಿ, ಸಮಾಜನೀತಿ ಇಲಾಖೆಕಾರ್ಯದರ್ಶಿ ಮೊದಲಾದವರಲ್ಲಿ ಯಾರಾದರೊಬ್ಬರ ಶಿಫಾರಸು ಸಹಿತ ಅರ್ಜಿಯನ್ನು ಡಾ.ಅಂಬೇಡ್ಕರ್ ಫೌಂಡೇಷನ್‍ಗೆ ಸಲ್ಲಿಸಬೇಕು ಈ ಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ: 04994-256162 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

