ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ 40ನೇ ವಾರ್ಷಿಕೋತ್ಸವವು ಡಿ.28ರಂದು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಅಂದು ಪ್ರಾತಃಕಾಲ 6 ಗಂಟೆಗೆ ಗಣಪತಿ ಹವನ, ಬೆಳಗ್ಗೆ 7 ರಿಂದ ಬಾಲಗೋಕುಲದ ಮಕ್ಕಳಿಂದ ಭಜನೆ ನಡೆಯಲಿರುವುದು. ಮಧ್ಯಾಹ್ನ 12.30ಕ್ಕೆ ಶರಣಂ ವಿಳಿ, ಮಹಾಪೂಜೆ, ಅನ್ನದಾನ, 1ಗಂಟೆಗೆ `ಗರುಡ ಗರ್ವಭಂಗ' ಯಕ್ಷಗಾನ ತಾಳಮದ್ದಳೆ ನಡೆಯಲಿರುವುದು. ಸಾಯಂ. 5ಗಂಟೆಗೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರವರ ಆಗಮನ, ಪೂರ್ಣಕುಂಭ ಸ್ವಾಗತ. 5.30 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿರುವುದು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿರುವರು. ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಲಿರುವರು. ಬಾಲಕೃಷ್ಣ ನಾಯ್ಕ ನೀರ್ಚಾಲು ಪ್ರಾಸ್ತಾವಿಕ ನುಡಿ, ಖಂಡಿಗೆ ಕೇಪು ಕೈಲಾಸೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರವೀಶ ಕೆ.ಎನ್., ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸ ಮೂರ್ತಿ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಮಂದಿರದ ಗುರುಸ್ವಾಮಿ ರಮೇಶ ಆಚಾರ್ಯ, ಕುಮಾರಸ್ವಾಮಿ ಭಜನ ಮಂದಿರದ ಗುರುಸ್ವಾಮಿ ಸುಬ್ರಹ್ಮಣ್ಯ ಆಚಾರ್ಯ, ಬದಿಯಡ್ಕ ಗ್ರಾ.ಪಂ.ಸದಸ್ಯ ಶಂಕರ ಡಿ., ರಾಜಗೋಪಾಲ ಓಣಿಯಡ್ಕ, ಅರುಣಾ ಉದಯಕುಮಾರ್ ಉಪಸ್ಥಿತರಿರುವರು. ಸಾಯಂ. 6.30 ರಿಂದ ದೀಪಾರಾಧನೆ, ಭಜನೆ. 7 ಗಂಟೆಗೆ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಿಂದ ಉಲ್ಪೆ ಮೆರವಣಿಗೆ ಹೊರಟು ಮೇಲಿನ ಪೇಟೆ ದಾರಿಯಾಗಿ ಶ್ರೀ ಮಂದಿರಕ್ಕೆ ತಲುಪಲಿದೆ. ರಾತ್ರಿ 9 ಗಂಟೆಗೆ ಮಂಗಳಾರತಿ, ಪ್ರಸಾದ ವಿತರಣೆ. 9.30ರಿಂದ ಸ್ಥಳೀಯ ಪುಟಾಣಿಗಳಿಂದ ನೃತ್ಯ ವೈವಿಧ್ಯ, ರಾತ್ರಿ 11ರಿಂದ ಶ್ರೀ ವೆಂಕಟರಮಣ ಸ್ವಾಮಿ ಕೃಪಾಶಿತ ಕಲಾಸಂಘ ಕಾಸರಗೋಡು ಇವರಿಂದ `ಶಬರಿಮಲೆ ಶ್ರೀ ಅಯ್ಯಪ್ಪ' ಎಂಬ ಯಕ್ಷಗಾನ ಬಯಲಾಟ ನಡೆಯಲಿರುವುದು.
ಡಿ.28ರಂದು ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನ ಮಂದಿರದ 40ನೇ ವಾರ್ಷಿಕೋತ್ಸವ
0
ಡಿಸೆಂಬರ್ 25, 2019