ಬದಿಯಡ್ಕ: ಬದಿಯಡ್ಕ: ಫೆಬ್ರವರಿ 25ರಿಂದ ಮಾರ್ಚ್ 2ರ ತನಕ ದೇವರ ಗುಡ್ಡೆ ಶ್ರೀಶೈಲ ಮಹಾದೇವ ಕ್ಷೇತ್ರದಲ್ಲಿ ಜರಗಲಿರುವ ಅತಿರುದ್ರ ಮಹಾಯಾಗ ಹಾಗೂ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಯಾಗ ಶಾಲೆಯ ಮೇಲ್ಛಾವಣಿಗೆ ಮುಳಿ ಹುಲ್ಲನ್ನು ಸಂಗ್ರಹಿಸಲಾಯಿತು. ಬೇಳ ದರ್ಭೆತ್ತಡ್ಕ ವಿಶಾಲ ಮೈದಾನದಲ್ಲಿ ಹುಲುಸಾಗಿ ಬೆಳೆದ ಹುಲ್ಲನ್ನು ಬುಧವಾರ ಸಂಗ್ರಹಿಸಲಾಯಿತು. ನೀರ್ಚಾಲು ಕೃಷಿ ಯಾಗ ಸಮಿತಿಯ ಸಂಚಾಲಕ ರಾಮಪಾಟಾಳಿ, ಗ್ರಾಮಪಂಚಾಯಿತಿ ಸದಸ್ಯ ಡಿ.ಶಂಕರ, ನ್ಯಾಯವಾದಿ ಸತೀಶ್ ಕೋಟೆಕಣಿ, ಮೋಹನ್ ದಾಸ ರೈ, ಶಿವಶಂಕರ, ಸ್ಥಳೀಯ ಮಾತೆಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು. ನೀರ್ಚಾಲು ಸಮಿತಿಯ ನೇತೃತ್ವದಲ್ಲಿ ಈಗಾಗಲೇ ಭತ್ತದ ಕೃಷಿಯನ್ನು ಮಾಡಿ ಹವಿಸ್ಸಿಗಿರುವ ಭತ್ತವನ್ನು ಸಂಗ್ರಹಿಸಲಾಗಿದೆ. ಇದೇ ರೀತಿ ನೈಸರ್ಗಿಕವಾಗಿ ಎಲ್ಲಾ ಹವಿಸ್ಸುಗಳನ್ನೂ ವಿವಿಧೆಡೆಗಳಲ್ಲಿ ಈಗಾಗಲೇ ಬೆಳೆಸಲಾಗುತ್ತಿದೆ. ಸಂಪೂರ್ಣ ಸಾವಯವ ಕೃಷಿಯ ಮೂಲಕವೇ ಯಾಗಕ್ಕಿರುವ ಎಲ್ಲಾ ರೀತಿಯ ಬೇಳೆ ಕಾಳುಗಳನ್ನು ಕೃಷಿಮಾಡಲಾಗಿದೆ.
ಅತಿರುದ್ರ ಯಾಗದ ಮೇಲ್ಛಾವಣಿಗೆ ಮುಳಿಹುಲ್ಲು ಸಂಗ್ರಹ
0
ಡಿಸೆಂಬರ್ 25, 2019