ಕುಂಬಳೆ: ಬಹಳ ಅಪರೂಪವಾಗಿರುವ ಕಂಕಣ ಸೂರ್ಯ ಗ್ರಹಣ ಡಿ.26ರಂದು ನಡೆಯಲಿದ್ದು, ಗ್ರಹಣ ಪರಿಹಾರವಾಗಿ ಸೀರೆ ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿದೆ. ಈ ಹಿಂದೆ ಇಂತಹ ಕಂಕಣ ಗ್ರಹಣವು 1748ರಲ್ಲಿ ಸೂರ್ಯನಿಗೆ ಸಂಭವಿಸಿದ್ದು, ಮತ್ತೆ 2064ರಲ್ಲಿ ಉಂಟಾಗಲಿದೆ.
ಶ್ರೀಕ್ಷೇತ್ರದಲ್ಲಿ ಅಂದು ಬೆಳಿಗ್ಗೆ 11.30ಕ್ಕೆ ಬಾಗಿಲು ತೆರೆಯಲಾಗುವುದು, ನಂತರ ನಿತ್ಯಪೂಜೆ, ಸೇವೆಗಳು ನಡೆಯಲಿದೆ. ದೋಷ ಪರಿಹಾರಕ್ಕಾಗಿ ಎಳ್ಳೆಣ್ಣೆ ಸಪರ್ಪಣೆ, ತುಪ್ಪದ ಎಣ್ಣೆ, ಎಳ್ಳೆಣ್ಣೆ ದೀಪ, ರುದ್ರಾಭಿಷೇಕ ಸೇವೆ, ವಿಶೇಷ ಗ್ರಹಣ ಶಾಂತಿ ಹೋಮ ನಡೆಯಲಿದ್ದು, ಹೋಮ ಬೆಳಿಗ್ಗೆ 8.30ಕ್ಕೆ ಆರಂಭಗೊಳ್ಳಲಿದೆ.
ಈ ಪ್ರಯುಕ್ತ ಗ್ರಹಣ ದೋಷವಿರುವ ನಕ್ಷತ್ರ ರಾಶಿಯವರು ದೋಷ ಪರಿಹಾರಕ್ಕಾಗಿ ಶ್ರೀಕ್ಷೇತ್ರದಲ್ಲಿ ದೀಪದ ಎಣ್ಣೆ ಸಮರ್ಪಿಸಬಹುದು, ಕನಿಷ್ಠ 21 ಬಾರಿ ದೇವರಿಗೆ ಪ್ರದಕ್ಷಿಣೆ ಹಾಗೂ ಗ್ರಹಣಕ್ಕೆ ಸಂಬಂಧಿಸಿದಂತೆ ಧಾನ್ಯಗಳನ್ನು ಬ್ರಾಹ್ಮಣರಿಗೆ ದಾನ ಮಾಡಬಹುದು ಎಂದು ಶ್ರೀಕ್ಷೇತ್ರದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.


