ಕಾಸರಗೋಡು: ಬಾಡಿ ಬ್ಯುಲ್ಡಿಂಗ್ ಏಂಡ್ ಫಿಟ್‍ನೆಸ್ ಅಸೋಸಿಯೇಶನ್ ಆಫ್ ಕಾಸರಗೋಡು ಮತ್ತು ಪವರ್ ಹೆಲ್ತ್ ಕೇರ್ ವತಿಯಿಂದ ನಗರಸಭಾಂಗಣ ಸನಿಹದ ಸಂಧ್ಯಾರಾಗಂ ತೆರೆದ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದೇಹದಾಢ್ರ್ಯ ಸ್ಪರ್ಧೆಯಲ್ಲಿ ಹನುಮಾನ್ ಜಿಮ್ ಕಾಞಂಗಾಡು ತಂಡ ಚಾಂಪ್ಯನ್‍ಶಿಪ್ ಪಡೆದುಕೊಂಡಿತು.
ಲಯನ್ಸ್ ಜಿಮ್ ಕಾಞಂಗಾಡು ದ್ವಿತೀಯ, ಲೈಫ್‍ಲೈನ್ ಮೂಲಾಕಂಡ ತೃತೀಯ ಸ್ಥಾನ ಪಡೆದುಕೊಂಡಿತು. ಸೀನಿಯರ್ ವಿಭಾಗದ ಮಿಸ್ಟರ್ ಕಾಸರಗೋಡು ಆಗಿ ಹನುಮಾನ್ ಜಿಮ್ ಕಾಞಂಗಾಡಿನ ಲಿಕೇಶ್ ಆಯ್ಕೆಯಾದರು. ಜೂನಿಯರ್ ಮಿಸ್ಟರ್ ಕಾಸರಗೋಡು ಆಗಿ ಮೈಜಿಮ್ ಕಾಞಂಗಾಡಿನ ಅಶ್ವಿನ್, ಸಬ್‍ಜೂನಿಯರ್ ವಿಭಾಗ ಮಿಸ್ಟರ್ ಕಾಸರಗೋಡು ಆಗಿ ಫಿಟ್‍ನೆಸ್ ಪ್ಲಾಂಟ್ ಪೆರಿಯದ ಸಂಜಯ್, ಮಾಸ್ಟರ್ಸ್ ಮಿಸ್ಟರ್ ಕಾಸರಗೋಡು ಆಗಿ ಲೈಫ್ ಜಿಮ್ ಕಾಞಂಗಾಡಿನ ರಮೇಶ್, ಮೋಡರ್ನ್ ಫಸಿಕ್ ಮಿಸ್ಟರ್ ಕಾಸರಗೋಡು ಆಗಿ ಹನುಮಾನ್ ಜಿಮ್ ಕಾಞಂಗಾಡಿನ ಶಿವರಾಜ್ ಆಯ್ಕೆಯಾದರು.
ವಿಜೇತರಿಗೆ ಶಾಸಕ ಎನ್.ಎ ನೆಲ್ಲಿಕುನ್ನು ಬಹುಮಾನ ವಿತರಿಸಿದರು. ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ಚಾಂಪ್ಯನ್‍ಶಿಪ್ ಉದ್ಘಾಟಿಸಿದರು. ಸಂಘಟನೆ ರಾಜ್ಯ ಸಮಿತಿ ಕಾರ್ಯದರ್ಶಿ ಟಿ.ಎ. ಶಾಫಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಹಬೀಬ್ ರಹಮಾನ್, ಸಿದ್ದಿಕ್ ಖಾನ್ ಸಹಿತ ಹಲವರು ಪಾಲ್ಗೊಂಡಿದ್ದರು.


