ಕಾಸರಗೋಡು: ಮಂಗಳೂರಿನಿಂದ ಊರಿಗೆ ತೆರಳಲು ಬಯಸುತ್ತಿರುವ ಕೇರಳೀಯ ವಿದ್ಯಾರ್ಥಿಗಳಿಗೆ ಇಂದು(ಡಿ.21) ಶನಿವಾರ ಪೆÇಲೀಸ್ ಸಂರಕ್ಷಣೆಯೊಂದಿಗೆ 5 ಕೆ.ಎಸ್.ಆರ್.ಟಿ.ಸಿ. ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಮಧ್ಯಾಹ್ನ 3 ಗಂಟೆಗೆ ಪಂಪ್ ವೆಲ್ ನಿಂದ ಬಸ್ ಸೇವೆ ಆರಂಭಗೊಂಡಿದೆ. ವಿದ್ಯಾರ್ಥಿಗಳು ಹೊರಡುವ ನಿಟ್ಟಿನಲ್ಲಿ ಆಯಾ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿರುವರು.


