ಕಾಸರಗೋಡು: "ಪ್ರವಾಸಿಗರೇ ಬನ್ನಿ...ಈ ಬಾರಿಯ ಕ್ರಿಸ್ಮಸ್ ಹಬ್ಬ ಮತ್ತು ಹೊಸವರ್ಷಾಚರಣೆಯನ್ನು ಬೇಕಲಕೋಟೆಯಲ್ಲಿ ಆಚರಿಸೋಣ..." ಈ ಘೊಷಣೆಯೊಂದಿಗೆ ಜಿಲ್ಲೆಯ ಐತಿಹಾಸಿಕ ಸಂಕೇತ ಬೇಕಲಕೋಟೆ ಸಜ್ಜುಗೊಂಡಿದೆ. ಡಿ.24ರಿಂದ 2020 ಜ.1 ವರೆಗೆ ಇಲ್ಲಿ ಬೇಕಲ ಕೃಷಿ-ಪುಷ್ಪ-ಫಲ ಮೇಳ ನಡೆಯಲಿದೆ. ಪ್ರವಾಸಿಗರನ್ನು ಪ್ರಧಾನ ಗುರಿಯಾಗಿಸಿ ನಡೆಯುವ ಈ ಸರಣಿಯಲ್ಲಿ ಪುಷ್ಪ ಮೇಳ, ಆಹಾರ ಮೇಳ, ಕರಾವಳಿ ಕಲಾ-ಕ್ರೀಡಾ ಮೇಳ ಇತ್ಯಾದಿಗಳು ಜರುಗಲಿವೆ. ಅಗ್ರಿ ಹಾರ್ಟಿ ಸೊಸೈಟಿ ನೇತೃತ್ವದಲ್ಲಿ ಈ ಮೇಳ ನಡೆಯಲಿದೆ.
ಕಾರ್ಯಕ್ರಮ ಅಂಗವಾಗಿ ಡಿ.24ರಂದು ಬೆಳಗ್ಗೆ 10 ಗಂಟೆಗೆ ಮೆರವಣಿಗೆ ನಡೆಯಲಿದೆ. 10.30ಕ್ಕೆ ನಡೆಯುವ ಸಮಾರಮಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಮೇಳ ಉದ್ಘಾಟಿಸುವರು. ಶಾಸಕ ಕೆ.ಕುಂಞÂ್ಞ ರಾಮನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಶಾಸಕರಾದ ಎಂ.ರಾಜಗೋಪಾಲ್, ಎನ್.ಎ.ನೆಲ್ಲಿಕುನ್ನು, ಎಂ.ಸಿ.ಕಮರುದ್ದೀನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ, ಪ್ರಧಾನ ಕೃಷಿ ಅಧಿಕಾರಿ ಮಧು ಜಾರ್ಜ್ ಮತ್ತಾಯಿ, ಕೃಷಿ ಸಹಾಯಕ ನಿರ್ದೇಶಕಿ ಆರ್.ವೀಣಾರಾಯಿ, ರಾಜಕೀಯ ಪಕ್ಷಗಳ ನೇತಾರರು, ವಿವಿಧ ಗ್ರಾಮಪಂಚಾಯತ್ ಅಧ್ಯಕ್ಷರು, ಬಿ.ಆರ್.ಡಿ.ಸಿ.ಯ ಆಡಳಿತ ನಿರ್ದೇಶಕ ಟಿ.ಕೆ.ಮನ್ಸೂರ್, ಕಾರ್ಯಕ್ರಮ ಸಮಿತಿ ಪದಾಧಿಕಾರಿಗಳು ಮೊದಲದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಾಗತಿಸುವರು. ಸಮಘಟಕ ಸಮಿತಿ ಅಧ್ಯಕ್ಷ ಕೆ.ರವೀಂದ್ರನ್ ವಂದಿಸುವರು.
ಆನ್ ದಿ ಸ್ಪಾಟ್ ಸ್ಪರ್ಧೆಗಳು:
ಈ ಮೇಳ ಸರಣಿ ಆನ್ ದಿ ಸ್ಪಾಟ್ ಸ್ಪರ್ಧೆಗಳೊಂದಿಗೆ ಆರಂಭಗೊಳ್ಳಲಿದೆ. ಡಿ.24ರಂದು ಬೆಳಗ್ಗೆ 10 ಗಂಟೆಗೆ ಜಪಾನೀಸ್ ಸ್ಟೈಲ್, ಫ್ರೀ ಸ್ಟೈಲ್, ಮಾಸ್ ಅರೇಂಜ್ ಮೆಂಟ್, ವನ್ ಫ್ಲವರ್ ವನ್ ಲೀಫ್, ಫೆÇ್ಲೀಟಿಂಗ್, ಹಾಲ್ಗಿಗ್ ಅರೇಂಜ್ ಮೆಂಟ್, ವಾಲ್ ಬ್ರಾಕೆಟ್, ಬೊಕ್ಕೆ(ಹೂಗಳು, ಎಲೆಗಳು ಮಾತ್ರ), ಬೊಕ್ಕೆ(ಕೃತಕ ಹೂವುಗಳು ಬಳಸಿ, ಪ್ಲಾಸ್ಟಿಕ್ ಹೂಗಳು ಕೂಡದು), ಪಾಳುವಸ್ತುಗಳಿಂದ ಅಲಂಕಾರ ವಸ್ತುಗಳ ತಯಾರಿ, ಡ್ರೈ ಫ್ಲವರ್ ಅರೆಂಜ್ ಮೆಂಟ್, ಫೆÇಟೋಗ್ರಫಿ ಸಹಿತ ಸ್ಪರ್ಧೆಗಳು ನಡೆಯಲಿವೆ. ಬೇಕಾದ ಸಾಮಾಗ್ರಿಗಳನ್ನು ಅವರವರೇ ತರಬೇಕು. ಕೃತಕ ಹೂವುಗಳನ್ನು ಮೊದಲೇ ಸಿದ್ಧಪಡಿಸಿ ತರಬಹುದು.
ಪ್ರದರ್ಶನ ಸ್ಪರ್ಧೆಗಳು:
ಆರ್ಕಿಡ್, ಆಂಥೂರಿಯಂ, ತರಕಾರಿ ಇತ್ಯಾದಿ ಮನೆಯಲ್ಲೇ ಬೆಳೆಯುವವರು ನೀವಾಗಿದ್ದರೆ, ಬೇರೇನೂ ಯೋಚಿಸಬೇಡಿ. ನೇರವಾಗಿ ಈ ಉತ್ಪನ್ನಗಳ ಸಹಿತ ಡಿ.24ರಿಂದ ಬೇಕಲಕೋಟೆಯಲ್ಲಿ ನಡೆಯುವ ಈ ಮೇಳಕ್ಕೆ ಬನ್ನಿ. ಕೃಷಿ-ಪುಷ್ಪ ಮೇಳದಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವ ಅವಕಾಶ ಇದೆ. ಹೂದಾನಿಗಳಲ್ಲಿ ಬೆಳಸುವ ಗುಲಾಬಿ ಸಹಿತ ಹೂವುಗಳಲ್ಲದೆ ಕ್ಯಾಕ್ಟಸ್, ಬೋನ್ಸಾಯ್ ಇತ್ಯಾದಿಗಳೂ, ತೆಂಗಿನಗೊನೆ, ಅಡಕೆ ಗೊನೆ, ಗಡ್ಡೆಗಳು(ಒಂದೇ ಗಡ್ಡೆ), ಹಣ್ಣುಗಳು(ಪ್ರತಿ ಹಣ್ಣು ತಲಾ 2) ತರಕಾರಿ,ಮೆಣಸು ಇತ್ಯಾದಿ ತಲಾ 100 ಗ್ರಾಂ, ಔಷಧ ಸಸ್ಯಗಳು ಇತ್ಯಾದಿಗಳನ್ನು ಪ್ರದರ್ಶಿಸಬಹುದು.
ಕ್ರಿಸ್ಮಸ್ ದಿನ ಕಲಾ ಪ್ರಸ್ತುತಿ:
ಡಿ.25ರಂದು ಕ್ರಿಸ್ಮಸ್ ಹಬ್ಬಾಚರಣೆ ಅಂಗವಾಗಿ ಸಂಜೆ 6 ಗಂಟೆಗೆ ಗಾನಮೇಳ ನಡೆಯಲಿದೆ. 26ರಂದು ಬೆಳಗ್ಗೆ 10 ಗಂಟೆ ವರೆಗೆ ನೋಂದಣಿ ನಡೆಯಲಿದೆ. 10 ಗಂಟೆಗೆ ವಿವಿಧ ಸ್ಪರ್ಧೆಗಳು ನಡೆಯಲಿಎ. ಮಧ್ಯಾಹ್ನ 2 ಗಂಟೆಗೆ ಮಡಲಿನಿಂದ ಚಪ್ಪರ ಹಾಸು ನಿರ್ಮಾಣ ಸ್ಪರ್ಧೆ ನಡೆಯಲಿದೆ. ನಂತರ ಗ್ರಾಮೋತ್ಸವ ಅಂಗವಾಗಿ ಪೂರಕ್ಕಳಿ, ತಿರುವಾದಿಕ್ಕಳಿ ಇತ್ಯಾದಿ ನಡೆಯಲಿವೆ.
ಡಿ.27ರಂದು ಬೆಳಗ್ಗೆ 10 ಗಂಟೆಗೆ "ಗೊಬ್ಬರ-ಆರೋಗ್ಯ ಪರಿಪಾಲನೆ" ಎಂಬ ವಿಷಯದಲ್ಲಿ ವಿಚಾರಸಂಕಿರಣ ನಡೆಯಲಿದೆ. ನಂತರ ರಸಪ್ರಶ್ನೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ 2 ಗಂಟೆ ವರೆಗೆ ನೋಂದಣಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಮದರಂಗಿ ಹಾಕುವ ಸ್ಪರ್ಧೆ ಜರುಗಲಿದೆ. 6 ಗಂಟೆಗೆ ಇಷಲ್ ನೈಟ್ ಜರುಗಲಿದೆ. ಡಿ.28ರಂದು ಬೆಳಗ್ಗೆ 10 ಗಂಟೆ ವರೆಗೆ ನೋಂದಣಿ, 10 ಗಂಟೆಗೆ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ, 6 ಗಂಟೆಗೆ ಓಲ್ಡ್ ಈಸ್ ಗೋಲ್ಡ್ ನಡೆಯಲಿದೆ. 29ರಂದು ಸಂಜೆ 6 ಗಂಟೆಗೆ ಯುವಜನೋತ್ಸವದಲ್ಲಿ "ಎ"ಶ್ರೇಣಿ ಲಭಿಸಿದ ವಿದ್ಯಾರ್ಥಿಗಳಿಂದ ಕಲಾಕಾರ್ಯಕ್ರಮ ನಡೆಯಲಿದೆ. ಡಿ.30ರಂದು ಸಂಜೆ 4 ಗಂಟೆಗೆ ಕೃಷಿ ನೌಕರರ ಗಾನಮಂಜರಿ ನಡೆಯಲಿದೆ. 31ರಂದು ಮಧ್ಯಾಹ್ನ 1ರಿಂದ 2 ಗಂಟೆ ವರೆಗೆ ಅಡುಗೆ ಸ್ಪರ್ಧೆ ನಡೆಯಲಿದೆ. (ಕೇಕ್, ಪಾಯಸ ಮೊದಲೇ ನಿರ್ಮಿಸಿ ತರಬೇಕು), 4ರಿಂದ ಕೃಷಿ ತಿಲಕ ಖದೀಜಾ ನೇತೃತ್ವದ ಮೌಲ್ಯ ವರ್ಧಿತ ಉತ್ಪನ್ನಗಳ ಕುರಿತು ವಿಚಾರಸಂಕಿರಣ , ನಂತರ ಕಮಿಡಿ ನೈಟ್, ಗಾನಮೇಳ ನಡೆಯಲಿದೆ. ಜ.1ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ.



