ಕಾಸರಗೋಡು: ರಾಜ್ಯ ಗ್ರಂಥಾಲಯ ಮಂಡಳಿ ವತಿಯಿಂದ "ಬರಹಗಾರರ ಕೂಟ" ಎಂಬ ಹೆಸರಿನ ಕಾರ್ಯಾಗಾರ ಶನಿವಾರ ನೀಲೇಶ್ವರ ಅಚ್ಚಾಂತುರ್ತಿ ತೇಜಸ್ವಿನಿ ನದಿತಟದಲ್ಲಿ ಆರಂಭಗೊಂಡಿದೆ.
ಹಿರಿಯ ಸಾಹಿತಿ ಕೆ.ಎಸ್.ರವಿಕುಮಾರ್ ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ ಭಾಗವಹಿಸುವವರಿಗಾಗಿ ಪ್ರಕಟಿಸಲಾದ ಕೃತಿಗಳ ಸಂಕಲನ"ಅಗ್ನಿಪರ್ವತಂಗಳ್ ಪುಗಯುನ್ನುಂಡ್" ಪುಸ್ತಕವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಬಿಡುಗಡೆಗೊಳಿಸಿದರು. ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಚೆರುವತ್ತೂರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಮುನಂಬತ್ ಗೋವಿಂದನ್, ರಾಜ್ಯ ಗ್ರಂಥಾಲಯ ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯ ಮುಂಙನಾಡ್ ರಾಮಚಂದ್ರನ್
ಉಪಸ್ಥಿತರಿದ್ದರು.
ಸಾಹಿತ್ಯ ಸಾಧಕರಾದ ಆರ್.ಎಸ್.ಆರ್.ಲಾಲ್, ಪಿ.ಪಿ.ಕೆ.ಪೆÇದುವಾಳ್ ಅವರನ್ನು ಅಭಿನಂದಿಸಲಾಯಿತು. ಮಂಡಳಿ ಕಾರ್ಯದರ್ಶಿ ನ್ಯಾಯವಾದಿ ಪಿ.ಅಪ್ಪಕುಟ್ಟನ್ ಸ್ವಾಗತಿಸಿದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಪಿ.ವಿ.ಕೆ.ಪನೆಯಾಲ್ ವಂದಿಸಿದರು. ಇಂದು(ಡಿ.22) ಸಂಜೆ 3.30ಕ್ಕೆ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಲಿದೆ.


