ಕಾಸರಗೋಡು: ಸ್ವಂತ ಮನೆಯೆಂಬ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ 2 ವರ್ಷಗಳ ಅವಧಿಯಲ್ಲಿ 2 ಲಕ್ಷ ಕುಟುಂಬಗಳಿಗೆ ಸ್ವಂತನಿವಾಸ ಒದಗಿಸಿದ ಸಂಭ್ರಮದಲ್ಲಿ ರಾಜ್ಯಸರಕಾರದ ಲೈಫ್ ಮಿಷನ್ ಇದೆ. ಲೈಫ್ ಮಿಷನ್ ಯೋಜನೆಯ ದ್ವಿತೀಯ ಹಂತ ಮನೆಯ ನಿರ್ಮಾಣ ಪೂರ್ಣಗೊಂಡಿರುವ ಫಲಾನುಭವಿಗಳ ಕುಟುಂಬ ಸಂಗಮ ಕಾರ್ಯಕ್ರಮ ಡಿ.15ರಿಂದ 2020 ಜ.15 ವರೆಗೆ ರಾಜ್ಯ ಮಟ್ಟದಲ್ಲಿ ನಡೆಯಲಿದೆ. ಯೋಜನೆ ಪ್ರಕಾರ 2 ಲಕ್ಷ ಮನೆ ನಿರ್ಮಾಣ ಪೂರ್ಣಗೊಂಡಿರುವ ಘೋಷಣೆಯನ್ನು 2020 ಜ.26ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಸಲಿದ್ದಾರೆ.
ಕಾರ್ಯಕ್ರಮ ಅಂಗವಾಗಿಫಲಾನುಭವಿಗಳ ಅದಾಲತ್ ಕೂಡ ನಡೆಯಲಿದೆ. ವಿವಿ ಇಲಾಖೆಗಳಿಂದ,ಏಜೆನ್ಸಿಗಳಿಂದ ಲಭಿಸಬೇಕಾಗಿರುವ ವಿವಿಧ ಸಮಾಜ ಸುರಕ್ಷಾ ಸೇವೆಗಳ ವಿಳಂಬ ಇತ್ಯಾದಿಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಅಕ್ಷಯ ಕೇಂದ್ರಗಳ ಮೂಲಕ ಆಧಾರ್ ಕಾರ್ಡಿನಲ್ಲಿ ತಿದ್ದುಪಡಿ, ಚುನಾವಣೆ ಗುರುತು ಚೀಟಿಯಲ್ಲಿ ತಿದ್ದುಪಡಿ, ಲೀಡ್ ಬ್ಯಾಂಕ್, ರೀಜನಲ್ ಬ್ಯಾಂಕ್ ಇತ್ಯಾದಿಗಳ ಮೂಲಕ ಬ್ಯಾಂಕ್ ಖಾತೆ, ಸಿವಿಲ್ ಸಪ್ಲೈಸ್ ಮೂಲಕ ಪಡಿತರ ಚೀಟಿಯಲ್ಲಿ ತಿದ್ದುಪಡಿ, ಗ್ಯಾಸ್ ಏಜೆನ್ಸಿ ಗಳ ಮೂಲಕ ಪ್ರಧಾನಮಂತ್ರಿ ಉಜ್ವಲ್ಯೋಜನಾ, ಶುಚಿತ್ವ ಮಿಷನ್ ಮೂಲಕ ಸ್ವಚ್ ಭಾರತ್ ಅಭಿಯಾನ್, ಕುಟುಂಬಶ್ರೀ ಮೂಲಕ ಡಿ.ಡಿ.ಯು.ಕಡ.ವೈ(ನೌಕರಿ ತರಬೇತಿ), ಎಂ.ಜಿ.ಎನ್.ಆರ್.ಇ.ಜಿ.ಎಸ್. ಮೂಲಕ ನೌಕರಿ ಕಾರ್ಡ್ ಇತ್ಯಾದಿ ಸೇವೆಗಳನ್ನು ಅದಾಲತ್ ಮೂಲಕ ಪಡೆಯಬಹುದು.
ಲೈಫ್ ಮಿಷನ್ ಫಲಾನುಭವಿಗಳಿಗೆ ಭಾರೀ ರಿಯಾಯಿತಿ ದರದಲ್ಲಿ ಪ್ರಧಾನ ಕಂಪನಿಗಳ ನಿರ್ಮಾಣ ಸಾಮಾಗ್ರಿಗಳು ಲಭಿಸುತ್ತಿವೆ. ಮನೆಯ ನಿರ್ಮಾಣ ಪೂರ್ಣಗೊಂಡ ವೇಳೆ ಪೈಂಟ್, ಟೈಲ್ಸ್, ಇಲೆಕ್ಟ್ರಿಕಲ್ ಫಿಟ್ಟಿಂಗ್ಸ್, ಸಹಿತ ಹಲವು ವಿಚಾರಗಳ ಸಾಮಾಗ್ರಿಗಳ ಪ್ರದರ್ಶನ ಮತ್ತು ವಿತರಣೆ ಈ ವೇಳೆ ನಡೆಯಲಿದೆ.
ಲೈಫ್ ಮಿಷನ್ ಫಲಾನುಭವಿಗಳ ಬ್ಲೋಕ್, ಜಿಲ್ಲಾ, ನಗರಸಭೆ ಮಟ್ಟದ ಸಂಗಮಗಳ ರೂಪುರೇಷೆ ಸಿದ್ದತೆ ಮತ್ತು ಜಿಲ್ಲಾ ಮಟ್ಟದ ಸಂಗಮ ನಡೆಸುವ ನಿಟ್ಟಿನಲ್ಲಿ ಸಮಗಟಕ ಸಮಿತಿ, ಉಪಸಮಿತಿಗಳ ರಚನೆ ಮತ್ತು ಸಮಾಲೋಚನೆ ಸಭೆ ಡಿ.24ರಂದು ಬೆಳಗ್ಗೆ 11 ಗಂಟೆಗೆ ಕಾಞಂಗಾಡ್ ತಾಲೂಕು ಸಭಾಂಗಣದಲ್ಲಿ ನಡೆಯಲಿದೆ. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು.


