ಕಾಸರಗೋಡು: ಮುಂದಿನ ಮಾರ್ಚ್ ತಿಂಗಳಲ್ಲಿ ಕುಟುಂಬಶ್ರೀ `ಕೇರಳ ಚಿಕನ್' ಮಾರುಕಟ್ಟೆಗೆ ಬರಲಿದೆ. ಕೇರಳ ಚಿಕನ್ ಎಂಬ ಬ್ರಾಂಡ್‍ನಲ್ಲಿ ಕುಟುಂಬಶ್ರೀ ಮಾರುಕಟ್ಟೆಗಿಳಿಸಲಿದೆ ಎಂದು ಕುಟುಂಬಶ್ರೀ ಕಾರ್ಯನಿರ್ವಹಣಾ ನಿರ್ದೇಶಕ ಎಸ್.ಎಂ.ಕಿಶೋರ್ ತಿಳಿಸಿದ್ದಾರೆ.
ಪ್ರಸ್ತುತ ಕುಟುಂಬಶ್ರೀ ಉತ್ಪಾದಿಸುವ ಕೋಳಿಗಳು ನೀಟ್ ಪೆÇ್ರಡೆಕ್ಟ್ ಆಫ್ ಇಂಡಿಯಾ ಸೇರಿದಂತೆ ಇತರ ಸಂಸ್ಥೆಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಇನ್ನು ಮಾಂಸದ ಕೋಳಿಗಳನ್ನು ಕುಟುಂಬಶ್ರೀ ತನ್ನದೇ ಆದ ಬ್ರಾಂಡ್‍ನಲ್ಲಿ ಮಾರುಕಟ್ಟೆಗೆ ಇಳಿಸಲಿದೆ. 100 ದಿನಗಳೊಳಗೆ 100 ಮಾರಾಟ ಕೇಂದ್ರಗಳನ್ನು ಆರಂಭಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಕೇರಳದಲ್ಲಿ ಪ್ರತೀ ವರ್ಷ ಸರಾಸರಿ 8 ಸಾವಿರ ಕೋಟಿ ರೂ.ಗಳ ಮಾಂಸದ ಕೋಳಿ ಮಾರಾಟವಾಗುತ್ತಿದೆ ಎಂಬುದು ಅಧಿಕೃತ ಲೆಕ್ಕಚಾರವಾಗಿದೆ.
ಈ ವ್ಯವಹಾರದಲ್ಲಿ ಶೇ.50 ರಷ್ಟನ್ನು ಮುಂದಿನ ಐದು ವರ್ಷದೊಳಗೆ ತಮ್ಮ ಹಿಡಿತಕ್ಕೆ ತರುವ ಯತ್ನವನ್ನು ಕುಟುಂಬಶ್ರೀ ನಡೆಸುತ್ತಿದೆ. ಮಾಂಸದ ಕೋಳಿ ನೂತನವಾಗಿ ಕುಟುಂಬಶ್ರೀ ಬ್ರೊೈಲರ್ ಫಾರ್ಮರ್ಸ್ ಪೆÇ್ರಡ್ಯೂಸರ್ ಎಂಬ ಸಂಸ್ಥೆಗೂ ರೂಪು ನೀಡಿದೆ.
ತಲಾ ಒಂದು ಕೋಳಿಯಿಂದ 13 ರೂ. ಲಾಭ ಲಭಿಸುವ ರೀತಿಯಲ್ಲಿ ಯೋಜನೆಗೆ ರೂಪು ನೀಡಲಾಗುವುದು. ಕೋಳಿ ಮರಿ ಉತ್ಪಾದನೆಯಿಂದ ಆರಂಭಗೊಂಡು ಮಾರುಕಟ್ಟೆ ತನಕದ ವಿಷಯಗಳಲ್ಲಿ ಕುಟುಂಬಶ್ರೀ ಸ್ವಾವಲಂಬನೆ ಸಾ„ಸಲಿದೆ. ಕೋಳಿ ಮಾಂಸದ ಕೋಳಿಯ ತೂಕ ಹೆಚ್ಚಿಸಲು ಕೆಲವರು ಕೃತಕ ಮಾರ್ಗ ಅನುಸರಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಇದರಿಂದ ಸಾಧ್ಯವಾಗಲಿದೆ ಎಂಬ ನಿರೀಕ್ಷೆಯನ್ನು ಎಸ್.ಎಂ.ಕಿಶೋರ್ ವ್ಯಕ್ತಪಡಿಸಿದ್ದಾರೆ.


