ಕಾಸರಗೋಡು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಸಲಾಗುತ್ತಿರುವ ಪ್ರಚಾರಗಳ ವಿರುದ್ಧ ಗೃಹ ಸಂದರ್ಶನ ಅಭಿಯಾನ ಮತ್ತು ಜನಜಾಗೃತಿ ಸಭೆ ನಡೆಸಲು ಬಿಜೆಪಿಯ ರಾಜ್ಯ ಘಟಕ ತೀರ್ಮಾನಿಸಿದೆ.
ಇದರಂತೆ ಡಿ.23 ರಿಂದ 31 ರ ವರೆಗೆ ಗೃಹ ಸಂಪರ್ಕ ನಡೆಸಿ ಪೌರತ್ವ ತಿದ್ದುಪಡಿ ವಿಷಯದಲ್ಲಿ ಹಿಂದಿನ ವಾಸ್ತವತೆ ಜನರ ಗಮನಕ್ಕೆ ತರಲಾಗುವುದು. ಇದಲ್ಲದೆ ಡಿ.24 ರಿಂದ 26 ರ ವರೆಗೆ ರಾಜ್ಯದ ಜಿಲ್ಲಾ ಕೇಂದ್ರಗಳು ಮತ್ತು ಮಂಡಲ ಮಟ್ಟಗಳಲ್ಲಿ ಜನಜಾಗೃತಿ ಸಭೆ ನಡೆಸಲಾಗುವುದು. ಇದರಲ್ಲಿ ಸಾಂಸ್ಕøತಿಕ ರಂಗಗಳ ಮುಖಂಡರು ಮತ್ತು ಚಲನಚಿತ್ರ ಕಾರ್ಯಕರ್ತರು ಭಾಗವಹಿಸಲಿದ್ದಾರೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಎಂದೂ ಮುಸ್ಲಿಂ ವಿರುದ್ಧವಲ್ಲ. ಕಾಯ್ದೆ ವಿರುದ್ಧ ಯೋಜನಾಬದ್ಧವಾದ ರೀತಿಯ ಅಪಪ್ರಚಾರ ನಡೆಸಲಾಗುತ್ತಿದೆ. ಇಂತಹ ನಿಲುವಿನಿಂದ ಸಿಪಿಎಂ ಮತ್ತು ಕಾಂಗ್ರೆಸ್ ಹಿಂದಕ್ಕೆ ಸರಿಯಬೇಕು. ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಒಳಗೊಂಡಿರುವ ಅದೇ ಬೇಡಿಕುಯನ್ನು ವರ್ಷಗಳ ಹಿಂದೆ ಕಾಂಗ್ರೆಸ್ ಕೂಡಾ ಮುಂದಿರಿಸಿತ್ತು. ಈಗ ಅದನ್ನು ವಿರೋ„ಸಿ ಕಾಂಗ್ರೆಸ್ ರಂಗಕ್ಕಿಳಿದಿದೆ. ಹಾಗಿದ್ದಲ್ಲಿ ಈ ಹಿಂದಿನ ನಿಲುವು ತಪ್ಪಾಗಿದೆ ಎಂಬುವುದನ್ನು ಒಪ್ಪಿಕೊಳ್ಳಲು ಮುಂದಾಗಬೇಕೆಂದು ರಮೇಶ್ ಆಗ್ರಹಿಸಿದ್ದಾರೆ. ಮುಸ್ಲಿಮರ ಮಧ್ಯೆ ಬಿರುಕು ಮೂಡಿಸಲು ಕೆಲವರು ಯತ್ನಿಸುತ್ತಿದಆದರೆ. ಅದನ್ನು ಮುಸ್ಲಿಮರು ಅರಿತುಕೊಂಡು ಹೋರಾಟದಿಂದ ಹಿಂದೆ ಸರಿಯಬೇಕೆಂದು ಎಂ.ಟಿ.ರಮೇಶ್ ವಿನಂತಿಸಿದ್ದಾರೆ.

