ಕಾಸರಗೋಡು: ರಾತ್ರಿ ಯಾ ಹಗಲಿನ ವೇಳೆಗಳಲ್ಲಿ ಎಲಿಯಾದರೂ ಸಿಲುಕಿಕೊಂಡು ಆ ಸಂದರ್ಭದಲ್ಲಿ ತುರ್ತಾಗಿ ಪೆÇಲೀಸ್ ಸಹಾಯ ಅಗತ್ಯವಿದ್ದಲ್ಲಿ 112 ಎಂಬ ಟೋಲ್ ಫ್ರೀ ನಂಬ್ರಕ್ಕೆ ಕರೆ ಮಾಡಿದರೆ ಪೆÇಲೀಸರು ತತ್‍ಕ್ಷಣ ಪೆÇಲೀಸರು ನೆರವಿಗಾಗಿ ಲಭಿಸುವರು.
ಈ ನಂಬ್ರದಲ್ಲಿ ಮಾಡಿದ ಕರೆ ನೇರವಾಗಿ ರಾಜ್ಯದ ಪ್ರಧಾನ ಕೇಂದ್ರದಲ್ಲಿರುವ ಕಮಾಂಡ್ ಸೆಂಟರ್‍ಗೆ ಸಂದೇಶ ಲಭಿಸಲಿದೆ. ಕರೆ ಮಾಡಿದರೆ ವ್ಯಕ್ತಿ ಇರುವ ಸ್ಥಳವನ್ನು(ಲೊಕೇಶನ್) ಮೊಬೈಲ್ ಕರೆ ನಂಬ್ರದ ಸಹಾಯದೊಂದಿಗೆ ಗುರುತಿಸಿ ಆ ಬಗ್ಗೆ ಆ ಪ್ರದೇಶದ ಪೆÇಲೀಸ್ ಠಾಣೆಗೆ ತುರ್ತು ಸಂದೇಶ ಲಭಿಸಲಿದೆ. ಆಗ ಪೆÇಲೀಸರು ತತ್‍ಕ್ಷಣ ಸ್ಥಳಕ್ಕಾಗಮಿಸಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಗಳಿಗೆ ತುರ್ತು ಸಸಾಯವನ್ನೊದಗಿಸುವರು.
112 ಟೋಲ್ ಫ್ರೀ ನಂಬ್ರದಲ್ಲಿ ಡಯಲ್ ಮಾಡಲು ಸಾಧ್ಯವಾಗದ ಸ್ಥಿತಿ ಉಂಟಾದಲ್ಲಿ ತಮ್ಮ ಮೊಬೈಲ್ ಫೆÇೀನ್‍ನ ಪವರ್ ಬಟರ್ ಮೂರು ಬಾರಿ ಒತ್ತಿದಲ್ಲಿ ಆ ಮೊಬೈಲ್ ಮೂಲಕ ಪೆÇಲೀಸರಿಗೆ ತುರ್ತು ಸಂದೇಶ ರವಾನೆಯಾಗುತ್ತದೆ.
ತುರ್ತು ಪೆÇಲೀಸ್ ಸಹಾಯಕ್ಕಾಗಿ 112 ಇಂಡಿಯಾ ಎಂಬ ಮೊಬೈಲ್ ಆ್ಯಪ್ ಕೂಡಾ ಈಗ ಸಹಾಯ ಒದಗಿಸಲಿದೆ. ಈ ಆ್ಯಪ್‍ನ ಫಾನಿಕ್ ಬಟನ್ ಒತ್ತಿದಲ್ಲಿ ಪೆÇಲೀಸ್ ಕಂಟ್ರೋಲ್ ರೂಂನ ಸಹಾಯ ಯಾಚನೆ ಸಂದೇಶ ಲಭಿಸುವುದು.
ಮಹಿಳೆಯರಿಗೆ ತುರ್ತು ಅಗತ್ಯಕ್ಕೆ ಪೆÇಲೀಸ್ ಸಹಾಯ ಬೇಕಾಗಿದ್ದಲ್ಲಿ ಪಿಂಕ್ ಪೆÇಲೀಸ್ ಪೆಟ್ರೋಲಿಂಗ್ ವಿಭಾಗದ 1515 ಎಂಬ ಟೋಲ್ ಫ್ರೀ ನಂಬ್ರ ಕರೆದು ಮಾಹಿತಿ ನೀಡಿದ್ದಲ್ಲಿ ಮಹಿಳಾ ಪೆÇಲೀಸರ ಸಹಾಯ ಲಭಿಸುವುದು.


