ಬದಿಯಡ್ಕ: ಕೆನರಾ ಬ್ಯಾಂಕ್ ಬದಿಯಡ್ಕ ಶಾಖೆಯ ವತಿಯಿಂದ ಬದಿಯಡ್ಕ ಗ್ರಾಮಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ಘಟಕಗಳಿಗೆ ಕೊಡೆ ತಯಾರಿ ಮಾಡುವುದರ ಕುರಿತು ಒಂದು ದಿನದ ಶಿಬಿರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
ಬದಿಯಡ್ಕ ಕುಟುಂಬಶ್ರೀ ಹಾಲ್‍ನಲ್ಲಿ ಜರಗಿದ ಕಾರ್ಯಕ್ರಮವನ್ನು ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್‍ನ ಯೋಜನೆಯು ಶ್ಲಾಘನೀಯವಾಗಿದೆ. ಸಂಸ್ಥೆಗಳು ಸಾಮಾಜಿಕ ಕಳಕಳಿಯಿಂದ ಮಾಡುವ ಕಾರ್ಯಗಳು ಬಡಜನತೆಯ ಬಾಳಿಗೆ ನೆರವಾಗಲಿ ಎಂದರು.
ಕೆನರಾ ಬ್ಯಾಂಕ್ ಬದಿಯಡ್ಕ ಶಾಖೆಯ ಪ್ರಬಂಧಕ ಹರಿಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಟುಂಬಶ್ರೀ ಸಿಡಿಎಸ್‍ನ ಅಧ್ಯಕ್ಷೆ ಸುಧಾ ಜಯರಾಂ, ಕೆನರಾ ಬ್ಯಾಂಕ್ ಕೃಷಿ ಅಧಿಕಾರಿ ಪ್ರದೀಪ್, ಅಧಿಕಾರಿ ಸುಬ್ರಹ್ಮಣ್ಯ ಭಟ್ ಎಡೆಕ್ಕಾನ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಿಡಿಎಸ್ ಸದಸ್ಯೆಯರಿಗೆ ಕೊಡೆತಯಾರಿ ಬಗ್ಗೆ ನುರಿತ ತರಬೇತುದಾರರಿಂದ ತರಬೇತಿಯನ್ನು ನೀಡಲಾಯಿತು.


