ಕುಂಬಳೆ: ಕೃಷಿ ಸಹಿತ ದೈನಂದಿನ ಅಗತ್ಯಗಳಿಗೆ ಯತೇಚ್ಚವಾಗುವ ಜಲಮೂಲಗಳನ್ನು ಸಂರಕ್ಷಿಸುವ, ಜಲ ಮಟ್ಟವನ್ನು ಎತ್ತರಿಸುವ ಯೋಜನಾ ಬದ್ದ ಸಮರ್ಥ ಕಾರ್ಯಕ್ರಮಗಳನ್ನು ಇಂದು ಅನುಸರಿಸುವ ಅಗತ್ಯ ಇದೆ. ಸರ್ಕಾರಗಳು ಮಂಜೂರುಗೊಸುವ ಜನಪರ ಯೋಜನೆಗಳನ್ನು ಗುಣಾತ್ಮಕವಾಗಿ ನಿರ್ವಹಿಸುವ ನಿಟ್ಟಿನಲ್ಲೂ ಸ್ಥಳೀಯ ನಾಗರಿಕರು ಕೈಜೋಡಿಸಿದಾಗ ಯಶಸ್ವಿಯಾಗುತ್ತದೆ ಎಂದು ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷ ಮೊಹಮ್ಮದ್ ಕುಞÂ್ಞ ಚಾಯಿಂದಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಬ್ಲಾ.ಪಂ. ನಿಧಿಯನ್ನು ಬಳಸಿ ನಾರಾಯಣಮಂಗಲ ಸಮೀಪದ ಕಾನ ಶ್ರೀಶಂಕರನಾರಾಯಣ ದೇವರ ಮಠದ ಸಮೀಪ ನಾಣಿತ್ತಿಲಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಮಡರೀಕಾಕ್ಷ ಕೆ.ಎಲ್. ಅಧ್ಯಕ್ಷತೆ ವಹಿಸಿದ್ದರು. ಬ್ಲಾ.ಪಂ.ಸದಸ್ಯ ಸತ್ಯಶಂಕರ ಭಟ್ ಎಚ್., ಕುಂಬಳೆ ಗ್ರಾ.ಪಂ.ಸದಸ್ಯ ರಮೇಶ್ ಭಟ್, ಸುಧಾಕರ ಕಾಮತ್, ಸುಜಿತ್ ರೈ ಉಪಸ್ಥಿತರಿದ್ದು ಶುಭಹಾರೈಸಿದರು. ವೆಂಕಟರಮಣ ಭಟ್ ಕೋಣಮ್ಮೆ, ಶಾರದಮ್ಮ ಕಬೆಕ್ಕೋಡು, ಎಚ್.ಶಾಮಪ್ರಸಾದ್, ಗೋಪಾಲಕೃಷ್ಣ ಮಡಿವಾಳ, ಪ್ರಶಾಂತ ಶೆಟ್ಟಿ, ನಾಗರಾಜ, ಎಚ್.ಎಂ.ಸೂರ್ಯನಾರಾಯಣ ಭಟ್ ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯ ಹರೀಶ್ ಗಟ್ಟಿ ಸ್ವಾಗತಿಸಿ, ವೆಂಕಟರಾಜ ಕಬೆಕ್ಕೋಡು ವಂದಿಸಿದರು.
ಸ್ಥಳೀಯ ಕೃಷಿಕರಾದ ಮಹೇಶ್ ಭಟ್ ಕಟ್ಟಂಪಾಡಿ ನೇತೃತ್ವದಲ್ಲಿ ಸ್ಥಳೀಯರ ಸಹಕಾರದಲಲಿ ಅಣೆಕಟ್ಟಿನಲ್ಲಿ ಹಲಿಗೆ ಜೋಡಿಸಿ ಮಣ್ಣು ತುಂಬಿಸಿದ್ದರ ಫಲವಾಗಿ ಪ್ರಸ್ತುತವ ಒಂದು ಕಿಲೋಮೀಟರ್ ಗಿಂತಲೂ ಹೆಚ್ಚಿನ ವ್ಯಾಪ್ತಿಯಲ್ಲಿ ನೀರು ಕಟ್ಟಿನಿಂತಿದ್ದು, ಈ ಪರಿಸರದ ಎಕ್ರೆಗಟ್ಟಲೆ ಕೃಷಿ ಭೂಮಿ ಸಹಿತ ಅಂತರ್ಜಲ ವೃದ್ದಿಗೆ ಸಹಕಾರವಾಗಲಿದೆ.


