ಪೆರ್ಲ: ಸೂರ್ಯಗ್ರಹಣ ಡಿಸೆಂಬರ್ 21ರಂದು ನಡೆಯಲಿದ್ದು, ಗ್ರಹಣದೋಷ ಪರಿಹಾರಾರ್ಥ ವಿಶೇಷ ಶನಿ ಪೂಜೆ ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 21ರಂದು ಬೆಳಗ್ಗೆ 9.30ರಿಂದ ಜರುಗಲಿದೆ. ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
ಮೂಲಾನಕ್ಷತ್ರದ ಧನುರಾಶಿಯಲ್ಲಿ ಸೂರ್ಯಗ್ರಹಣ ನಡೆಯಲಿದೆ. ಗ್ರಹಣದ ನಿಮಿತ್ತ ವೃಷಭ ರಾಶಿಯ ಕೃತಿಕ,ರೋಣಿ,ಮೃಗಶಿರಮೊದಲ2 ಪಾದ, ಕರ್ಕಟಕ ರಾಶಿಯ ಪುನರ್ವಸ್ಸು ಅಂತ್ಯ 1ನೇ ಪಾದ, ಪುಷ್ಯಾ, ಅಶ್ಲೇಷ, ಧನುರಾಶಿಯ ಮೂಲ, ಪೂರ್ವಾಷಾಡ, ಉತ್ತರಾಷಾಡ ಮಕರ ರಾಶಿಯ ಉತ್ತರಾಷಾಡ, ಶ್ರವಣ, ಧನಿಷ್ಟೆ, ಇತ್ಯಾದಿ ಕೆಲವು ರಾಶಿ ಹಾಗೂ ನಕ್ಷತ್ರಗಳಲ್ಲಿ ಜನಿಸಿದವರಲ್ಲಿ ದೋಷ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಈ ರಾಶಿ, ನಕ್ಷತ್ರಗಳನ್ನೊಳಗೊಂಡವರ ಸಹಿತ ಭಕ್ತಾದಿಗಳಿಗೆ ಪೂಜೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಪೂಜೆ ನಡೆಸುವವರು ಡಿಸೆಂಬರ್ 20ರ ಮೊದಲು(ಮೊಬೈಲ್-8289886520)ಹೆಸರು ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.


